ನುಂಗಣ್ಣರು
ಕವನ
ರಸ್ತೆ ದುರಸ್ತಿಗೆ ಹಣ ಬಿಡುಗಡೆಯಾಯಿತು
ಕಡತದಲಿ ಕೋಟಿ ಅಂಕೆ -ಸಂಖ್ಯೆ ಬರೆಯಲಾಯಿತು
ಕಾಮಗಾರಿಯ ಭರಾಟೆ ನೋಡಿ ಸಂತಸವಾಯಿತು
ಜೋರಾದ ಮಳೆಗೆ ಕೊಚ್ಚಿ ಹೋಯಿತು
ವೀಕ್ಷಣೆಗೆ ಅಧಿಕಾರಿಗಳು ಬಂದರು
ಪರಿಸರದವರ ಹೇಳಿಕೆ ಪಡೆದರು
ಭಾವಚಿತ್ರ ತೆಗೆದು ದಾಖಲೆ ಬರೆದರು
ನುಂಗಣ್ಣಗಳು ಮಹಡಿ ಮೇಲೆ ಮಹಡಿ ಕಟ್ಟಿದರು
ರಸ್ತೆ ಹೊಂಡ ಗುಂಡಿಗಳಲಿ ರಂಗವಲ್ಲಿ
ಕಣ್ಣಿಗೆ ಮಣ್ಣೆರೆಚುವ ನಾಟಕ ಕಳಪೆ ಎಂಬುದಿಲ್ಲಿ
ಇಲಿ-ಹೆಗ್ಗಣಗಳ ಸಂತಾನ ಹೆಚ್ಚಾಯಿತಿಲ್ಲಿ
ಬಿಲ ಕೊರೆದು ಜೇಬಿಗಿಳಿಸುವುದೇ ಕಾಯಕವಾಯಿತಿಲ್ಲಿ
ಮನಸ್ಸು ಮಾತು ಕೃತಿಯಲಿ ತಾಳೆಯಿಲ್ಲ
ನೈತಿಕ ಮೌಲ್ಯಗಳ ಅರ್ಥ ಗೊತ್ತೇಯಿಲ್ಲ
ಪಾಪಪ್ರಜ್ಞೆ ಎಂಬುದು ಮೊದಲೇಯಿಲ್ಲ
ಕಲಿಗಾಲ(ಕಲಿ-ಯುಗ)ದ ಮಹಿಮೆ ಎಂದ ವೃದ್ಧನೊಬ್ಬನಿಲ್ಲಿ
-ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್