ನುಗ್ಗೇಸೊಪ್ಪಿನ ಖಾರ ದೋಸೆ
ಬೇಕಿರುವ ಸಾಮಗ್ರಿ
ಬೇಕಾಗುವ ವಸ್ತುಗಳು: ಸ್ವಲ್ಪ ನುಗ್ಗೆ ಸೊಪ್ಪು, ಕೆಂಪು ಮೆಣಸು ೭-೮, ತೊಗರಿ ಬೇಳೆ ಹಾಗೂ ಬೆಳ್ತಿಗೆ ಅಕ್ಕಿ ತಲಾ ಅರ್ಧ ಪಾವು, ನೀರುಳ್ಳಿ ೧, ತೆಂಗಿನ ತುರಿ ೨ ದೊಡ್ಡ ಚಮಚ, ಹುಣಸೆ ಹುಳಿ ಸ್ವಲ್ಪ, ಇಂಗು, ರುಚಿಗೆ ಉಪ್ಪು, ಎಣ್ಣೆ.
ತಯಾರಿಸುವ ವಿಧಾನ
ತಯಾರಿಕಾ ವಿಧಾನ: ಮೊದಲಿಗೆ ತೊಗರಿ ಬೇಳೆ ಹಾಗೂ ಅಕ್ಕಿಯನ್ನು ಅರ್ಧ ಗಂಟೆ ನೀರಿನಲ್ಲಿ ನೆನೆಸಿಡಿ. ನಂತರ ನೆನೆಸಿದ ಅಕ್ಕಿ ಹಾಗೂ ಬೇಳೆ, ಮೆಣಸು, ಹುಣಸೆ ಹುಳಿ, ಇಂಗು, ಉಪ್ಪು, ಕಾಯಿ ತುರಿ ಎಲ್ಲವನ್ನೂ ಸೇರಿಸಿ ನಯವಾಗಿ ರುಬ್ಬಿರಿ. ಆ ರುಬ್ಬಿದ ಮಿಶ್ರಣಕ್ಕೆ ಕತ್ತರಿಸಿದ ನೀರುಳ್ಳಿ ಹಾಗೂ ಸಣ್ಣದಾಗಿ ಕತ್ತರಿಸಿದ ನುಗ್ಗೆ ಸೊಪ್ಪನ್ನು ಬೆರೆಸಿರಿ.(ಹಿಟ್ಟನ್ನು ತುಂಬಾ ತೆಳು ಮಾಡಬೇಡಿ) ಒಂದು ಕಾವಲಿಯನ್ನು ಒಲೆಯ ಮೇಲಿಟ್ಟು, ಬಿಸಿಯಾದ ಬಳಿಕ ದಪ್ಪವಾಗಿ ದೋಸೆಯ ಆಕಾರಕ್ಕೆ ಹುಯ್ಯಿರಿ. ದೋಸೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ ಕಾದ ಬಳಿಕ ಕಾವಲಿಯಿಂದ ತೆಗೆಯಿರಿ. ಖಾರ ಇರುವುದರಿಂದ ಊಟಕ್ಕೆ ರುಚಿಕರ.
ಹೇಳಿದ್ದು, ಮಾಡಿದ್ದು ನನ್ನ ಅಮ್ಮ ಕೆ.ಪಿ.ಸುಲೋಚನ ರಾವ್