ನೂರು ದೇವರ ಕಂಡೆ

ನೂರು ದೇವರ ಕಂಡೆ

ಕವನ

ನೂರು ದೇವರ ಕಂಡೆ ಸೂರ್ಯ ದೇವರ ಕಂಡೆ 

ಊರು ದೇವರ ಕಂಡೆ ಹನುಮದೇವ 

ಮೂರು ದೇವರು ಅಗ್ನಿ ವಾಯು ವರುಣನ ಕಂಡೆ

ಮಾರಿ ದೇವರ ಕಂಡೆ ರಾಮಚಂದ್ರ 

 

ನಿಂತ ದೇವರ ಕಂಡೆ ಕುಣಿವ ದೇವರ ಕಂಡೆ

ಕುಂತ ದೇವರ ಕಂಡೆ  ಅಳುವ ನಗುವ 

ಸಂತ ದೇವರ ಕಂಡೆ ಮುನಿವ ದೇವರ ಕಂಡೆ

ಅಂತು ದೇವರ ಕಂಡೆ ರಾಮಚಂದ್ರ 

 

ಎದ್ದ ದೇವರ ಕಂಡೆ ಚಿಕ್ಕ ದೇವರ ಕಂಡೆ

ಬಿದ್ದ ದೇವರ ಕಂಡೆ  ಸೋತು ಗೆದ್ದ 

ಸಿದ್ದ ದೇವರ ಕಂಡೆ ದೊಡ್ಡ ದೇವರ ಕಂಡೆ

ಶುದ್ದ ದೇವರ ಕಂಡೆ ರಾಮಚಂದ್ರ 

 

ಒಲವ ದೇವರ ಕಂಡೆ ಜಾತಿ ದೇವರ ಕಂಡೆ

ನಲಿವ ದೇವರ  ಶಾಂತಿ ಮಂತ್ರ ಪಟಿಸೊ 

ಚೆಲುವ ದೇವರ ಕಂಡೆ ಹೆಣ್ಣ ದೇವರ ಕಂಡೆ

ಕಲಿಸೊ ದೇವರ ಕಂಡೆ ರಾಮಚಂದ್ರ 

 

ಕಲ್ಲು ದೇವರ ಕಂಡೆ  ಮಣ್ಣು ದೇವರ ಕಂಡೆ

ಮಲ್ಲ ದೇವರ ಕಂಡೆ ಗದೆಯ ಬಿಲ್ಲು 

ಬಲ್ಲ ದೇವರ ಕಂಡೆ ನೂರು ದೇವರ ಕಂಡೆ 

ಎಲ್ಲ ದೇವರ ಕಂಡೆ ರಾಮಚಂದ್ರ

 

-ಬಂದ್ರಳ್ಳಿ ಚಂದ್ರು, ತುಮಕೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್