ನೂರು ಭಾವಗಳ ಮೂರು ಗಝಲ್ ಗಳು

ನೂರು ಭಾವಗಳ ಮೂರು ಗಝಲ್ ಗಳು

ಕವನ

ಗಝಲ್ ೧

 

ವೇಷಕ್ಕೆ ಹಾಕಿದ್ದ ಬಣ್ಣ ರೆಜ್ಜ ಸಮಯಲ್ಲೆ ಮಾಸುತ್ತು ಗೊಂತಿರಲೀ ಕೂಸೇ

ಕಿರೀಟಂಗಳ ತಲೆಲಿ ಹೊತ್ತಿದ್ದರೂ ನಡೆವಾಗ ಬೀಳುತ್ತು ಗೊಂತಿರಲೀ ಕೂಸೇ

 

ಎಲ್ಲವೂ ಎನ್ನಂದಲೇ ಹೇಳುವವರ ಮನೆಯೊಳಗಿನ ಮನವೆರಡೂ ಕುಸಿದಿರ್ತು

ತಲಗೇರಿದ ಅಮಲು ಜೀವಿತದ ಅವದಿಲೇ ಹೀಂಗೇ ಇಳಿತ್ತು ಗೊಂತಿರಲೀ ಕೂಸೇ

 

ಗೊಂತ್ತಿಪ್ಪವರ ಕಾಲಿಂಗೆ ಮೂಗಿಲಿಯ ಹಾಂಗೇ ವರೆಸುವುದರ ನಿಲ್ಲಿಸಿದರೆ ಒಳ್ಳೆದು

ದಿನ ಕಳೆದಾಂಗೆ ಹೃದಯಲ್ಲಿ ಕೂದೊಂಡಿದ್ದ ಆತ್ಮವೂ ಕೂಗುತ್ತು ಗೊಂತಿರಲೀ ಕೂಸೇ

 

ಸ್ವಂತ ಬುದ್ಧಿಯ ಮುಕ್ಕಿತಿಂಬಾ ಕೆಲಸಕ್ಕೆ ಹೋಗದ್ದೇ ಇನ್ನಾದರೂ ಬದುಕುವುದರ ಕಲಿ

ಎಲ್ಲವೂ ಮುಗಿದ ಕ್ಷಣಲ್ಲಿ ಕಣ್ಣೀರಿಲಿ ಜೀವನ ತೊಳೆದರೆ ಕಚ್ಚುತ್ತು ಗೊಂತಿರಲೀ ಕೂಸೇ

 

ಈಶನ ಮನಸ್ಸಿನೊಳವಿಪ್ಪ ಪ್ರಾಮಾಣಿಕತೆ ಯಾವತ್ತಿಗೂ ಜೀವಂತಿಕೆಲಿ ಸಾಗ್ಯೊಂಡಿರುತ್ತು

ಕಾರ್ಮೋಡವು ಕವಿಯದ್ದೇ ಒಳ್ಳೆಯ ತನವು ಉಳಿಯಲಿ ಯಾವತ್ತು ಗೊಂತಿರಲೀ ಕೂಸೇ

 

-ಹಾ ಮ ಸತೀಶ

 

ಗಜಲ್ ೨

 

ಮಾನಿನಿ ಹೆಜ್ಜೆಯ ಗೆಜ್ಜೆಯ ದನಿಗೆ

ಹರ್ಷಿತಳಾದೆ ಗೆಳೆಯಾ

ಅಂಗಳ ಮೇಲಿನ ಚುಕ್ಕಿಯ ಅಂದಕೆ

ಮೋಹಿತಳಾದೆ ಗೆಳೆಯಾ....

 

ಬಾನಿನ ತೇರದು ಚಂದ್ರನ ಸಾರೋಟು

ಕಂಗಳ ಚುಂಬಿಸಿದೆ

ಗಾನದ ಸ್ವರವದು ಭರವಸೆ ಮೂಡಿಸಿ

ವಿಶೇಷಳಾದೆ ಗೆಳೆಯಾ..

 

ಸಭಿಕರ ಕರತಾಡನ ಹೃದಯದಿ ಒಲವ

ಅಂಕುರಿಸಿದೆ ಸಂತಸದಿ

ತೋಷದಿ ಮಂದಿಯ ಮೆಚ್ಚುಗೆಗೆ ಬಾಗುತ

ನಿರ್ಮಲಳಾದೆ ಇನಿಯಾ...

 

ಮೋಡದ ಕಂಪನ ಕರ್ಣದಿ ನರ್ತಿಸಿ

ಹೃದಯವ ಅಪ್ಪಿರಲು

ಚಾಗದ ಭೋಗದ ನಲಿವಿನ ಕುಣಿತಕೆ

ನಿರ್ಮುಕ್ತಳಾದೆ ಇನಿಯಾ...

 

ಅಭಿಜ್ಞಳ ವೇದಿಕೆಯಲಿ ಮನಸಿನ ಭಾವಕೆ

ತುಷ್ಠಿಯು ಸಿಗುತಿರಲು

ಪದಗಳ ಸಾಲಿನ ನೃತ್ಯಕೆ ಮನಸೋತು

ನಿರ್ಭಯಳಾದೆ ಇನಿಯಾ...

 

-ಅಭಿಜ್ಞಾ ಪಿ.ಎಮ್ ಗೌಡ

 

ಗಝಲ್ ೩ 

 

ರೂಪಸಿ ರಂಭೆಯ ಅಂದವನು ಸವಿಯುತ್ತಿರುವೆ ಸಖಿ||

ತಾಪಸಿ ಅಹಲ್ಯೆಗೆ ಸಖನಾಗಿ ಮೆರೆಯುತ್ತಿರುವೆ ಸಖಿ||

 

ಗಂಧರ್ವ ಕನ್ಯೆಗೆ ಇಂದ್ರನು ದೊರತಂತೆ ತೋಷದಲಿ|

ಮಂದಾರ ಪುಷ್ಪಕೆ ಭ್ರಮರದಂತೆ ಬೆರೆಯುತ್ತಿರುವೆ ಸಖಿ||

 

ವಜ್ರಜಂಘ ಶ್ರೀಮತಿಯರ ಆಲಿಂಗನ ನಮ್ಮ ಅಪ್ಪುಗೆ|

ಪ್ರೇಮಪಾರಿಜಾತ ಸುಮವನು ಕರೆಯುತ್ತಿರುವೆ ಸಖಿ|

 

ಮನದನ್ನೆ ಗಣಿಯಲ್ಲಿನ ಸ್ವರ್ಣವನು ತಂದು ತೊಡಿಸುವೆ|

ಸ್ನೇಹಕ್ಕಾಗಿ ಬಳಿಬಂದಾಗ ದೂರಕೆ ಸರಿಯುತ್ತಿರುವೆ ಸಖಿ||

 

ಅಮೃತ ವಾಹಿನಿ ಜುಳುಜುಳು ನಾದದಲಿ ಶಬ್ದಮಾಡುವೆ|

ಅಭಿನವನ ಎದೆಯಲ್ಲಿ ಕಲರವದಿ ಹರಿಯುತ್ತಿರುವೆ ಸಖಿ||

 

  • ಶಂಕರಾನಂದ ಹೆಬ್ಬಾಳ 
ಚಿತ್ರ್