ನೆತ್ತರ ಪ್ರಾರ್ಥನೆ ಕೇಳೋಣ

ನೆತ್ತರ ಪ್ರಾರ್ಥನೆ ಕೇಳೋಣ

ಕವನ

 ಎತ್ತ ನೋಡಿದರೂ ಎತ್ತ ನೋಡಿದರೂ

ನೆತ್ತರದೆ ಸಾಮ್ರಾಜ್ಯ 
ನಿತ್ಯ ದೇವರಿಗೆ ನಾಲ್ಕು ದಿಕ್ಕಿನಲೂ 
ನೆತ್ತರದೆ ನೈವೇಧ್ಯ 


ಒಂದು ದಿಕ್ಕಿನಲ್ಲಿ ಹೆಣ್ಣಿಗಾಗಿ 
ಇನ್ನೊಂದು ದಿಕ್ಕಿನಲ್ಲಿ ಮಣ್ಣಿಗಾಗಿ
ಮತ್ತೊಂದು ದಿಕ್ಕಿನಲ್ಲಿ ಹೊನ್ನಿಗಾಗಿ 
ಮಗದೊಂದು ದಿಕ್ಕಿನಲ್ಲಿ ಹೊಟ್ಟೆಗಾಗಿ 

ಮದ್ದುಗುಂಡುಗಳು  ಹಾತೊರೆಯುತ್ತಿವೆ 
ನೆತ್ತರ ಸಾಗರ ಹರಿಸಲು 
ಚಾಕು ಚೂರಿಗಳು ಹಾತೊರೆಯುತ್ತಿವೆ 
ನೆತ್ತರ ನೆಲವನು ಸಾರಿಸಲು 
 
ಹೀಗೆ ಆದರೆ ಕಣ್ಮುಂದೇನೆ 
ಇಡಿ ಜಗತ್ತಿನ ಅಂತ್ಯ 
ಒಂದು ಕಾಲದಲಿ ಮಾನವರಿದ್ದರು
ಎಂಬಂತಾಗುವುದು ಸತ್ಯ 

ಅವನೇ ಯಾಕೆ ಇವನೇ ಯಾಕೆ 
ಎಂಬ ದುರಾಸೆಯ ಬಿಟ್ಟುಬಿಡಿ 
ಅವ ನನ್ನವ ಇವ ನನ್ನವ
ಎನ್ನುವುದೊಂದೇ ನೆನಪಲಿಡಿ 

ಹೆಣ್ಣು ಹೊನ್ನು ಮಣ್ಣು ಈ 
ಮೂರರ ಹಿಂದೆ ಓಡದಿರಿ 
ಬಂಧು ಬಳಗ ಗುರು ಹಿರಿಯರು
ಎಂಬ ನಂಟನು ಮರೆಯದಿರಿ 
 
ಶಾಂತಿ ಸಹನೆ ತಾಳ್ಮೆಯಿಂದಲೇ
ಭಾವೈಕ್ಯತೆಯ ಬೆಳೆಸೋಣ 
ಮತ್ತೆ ಹರಿಸದಿರಿ ನೆತ್ತರ ಓಕುಳಿ
ನೆತ್ತರ ಪ್ರಾರ್ಥನೆ ಕೇಳೋಣ
 

ಚುಕ್ಕಿ..

(ಪ್ರವೀಣ್.ಎಸ್.ಕುಲಕರ್ಣಿ )

 
 

Comments