ನೆನಪಾದ ಗೆಳತಿ...

ನೆನಪಾದ ಗೆಳತಿ...

ಕವನ

ಜಡೆಗೆ ಮುಡಿದ ಮಲ್ಲಿಗೆ

ತೇಲಿ ಬಂತು ಗಾಳಿಗೆ

ನಿನ ನೋಡಿ  ಸೋತು ಹೋದೆ

ಬಿಸಿಲಲ್ಲಿ ನಾ ನಡಿಗಿ ಹೋದೆ

 

ಮನಸ ನೀ ಸೋಕಿ ನಿಂತೆ

ಕತ್ತಲ ಕಣ್ಣಿಗೆ ಬೆಳಕ ತಂದೆ

ಹೃದಯ ಕದ್ದ ಎತ್ತ ಹೋದೆ

ಹುಡುಕ ಬಂದೆ ಮಾಯವಾದೆ

 

ದುಂಡು ಮುಖದ ಸುಂದರಿ

ನೀನು ನಗುತಾ ನಿಂತರೆ

ನನ್ನ ಒಳಗೆ ಕಚಗುಳಿ

ತಂದು ಹೋದ ಕಿನ್ನರಿ

 

ಬೆನ್ನ ಮೇಲೆ ಕೈಸವರಿ

ಕೆನ್ನೆ ಮೇಲೆ ಮುತ್ತೊತ್ತಿ

ಎದೆಗೆ ಒತ್ತಿಕೊಂಡ

ಕನಸ ಒಳಗೆ ಜಾರಿಹೋದೆ

 

ಗೆಜ್ಜೆ ಸದ್ದು ಕೇಳಿ ಬಂದೆ

ಹೂವು ಗಂಧ ಹಿಂದೆ ಬಂದೆ

ಮೋಡಿ ಮಾಡಿದ ಚೆಲುವೆ

ನನ್ನ ಪ್ರೀತಿ ಬಿಟ್ಟು ಎಲ್ಲೋದೆ

 

ಮಳೆಯಲ್ಲೂ ಬಿಸಿಲ ತಂದೆ

ಬಳಿಗೆ ಬಂದರೆ ಸಿಗಲಿಲ್ಲ

ಮರೆಗೆ ನಿಂತು ನಗು ಚೆಲ್ಲಿ

ನನ್ನನ್ನಾಕೆ ಬಿಟ್ಟು ಹೋದೆ

 

-ಹನುಮಂತಪ್ಪ ವಿ.ಎಸ್.

 

ಚಿತ್ರ್