ನೆನಪು

ನೆನಪು

ಬರಹ

ಮಹಾತ್ಮಾ ಗಾಂಧಿ
ಇದೀಗ ರಸ್ತೆಯ ಹೆಸರು
ಒಂದು ಬದಿಯೆಲ್ಲ
ಬಿಯರು ಬಾರು
ಇನ್ನೊಂದು ಬದಿ
ನಿಲ್ಲಿಸಿದ ವಿದೇಶಿ ಕಾರು
ನಡುವೆ ಹುಡುಗಿಯರ
ಹೆಗಲಿಗೆ ಜೋತು ನಡೆಯುವ
ಯುವಕರ ಯುವ
ಕರ ಕಾರುಭಾರು...

ಮಹಾತ್ಮಾ ಗಾಂಧಿ
ಇದೀಗ ಅಚಲ ಪ್ರತಿಮೆ
ಗಾಂಧಿ ಚೌಕ
ಎಲ್ಲರಿಗೂ ಸುಖ
ಖಜಾನೆ ನಮಗೆ ತೆರೆದು
ಉಪಕರಿಸಿದ ಮುದುಕ
ವರ್ಷಕ್ಕೆರಡು ಬಾರಿ
ನಮನ, ಹೂಗುಚ್ಛ
ಮತ್ತೆ ಕೇಳುವವರ್ಯಾರು
ನಮ್ಮ ದಾರಿ ಸ್ವಚ್ಛ..

- ಗೋಪೀನಾಥ ರಾವ್
raogopi@yahoo.com