ನೆನಪುಗಳು
ಕವನ
ಬ್ರಹದಾಕರವಾಗಿ ಬೆಳೆದು
ಹಲವಾರು ಜೀವಗಳಿಗೆ ಆಸರೆಯಾದ
ಮಾಮರವ ಕಂಡಾಗಲೆಲ್ಲಾ . . .
ನನ್ನ ಪ್ರೀತಿಯ 'ಅಪ್ಪನ' ನೆನಪು !
ಚುಮು ಚುಮು . . .ಬೆಳಕಲಿ ;
ಪುಟ್ಟ ಮರಿಗಳ ರೆಕ್ಕೆಯಡಿಯಲಿ;
ಬೆಚ್ಹಗಿರಿಸಿ ರಾಗವಾಗಿ ಹಾಡುವ ;
ಹಕ್ಕಿಗಳ ಕಂಡಾಗ 'ಅಮ್ಮ'ನ ನೆನಪು !
ಸುಂದರವಾಗಿ ಅರಳಿ ನಿಂತ ಚೆಂಗುಲಾಬಿಯ ;
ತುಂಬು ಕೆನ್ನೆಗಳಿಗೆ ಸವಿ ಮುತ್ತನಿಟ್ಟು
ಒಲವ ರಾಗವ ಹಾಡಿ ನಲಿಯುವ;
ದುಂಬಿಯ ಕಂಡಾಗ ನನ್ನ ಇನಿಯನ ನೆನಪು !
ಬಾನಂಗಳದಲಿ ತೇಲುತಲಿ. . .
ಹಾಲಿನಂತಹ ಬೆಳಕ ಚೆಲ್ಲುತ್ತಾ. . .
ನಿರ್ಮಲ ನಗುವ ಬೀರುತ ನಿಂತ
ಚಂದಿರನ ಕಂಡಾಗ ನನ್ನ ಕಂದನ ನೆನಪು !!!
Comments
ಉ: ನೆನಪುಗಳು
In reply to ಉ: ನೆನಪುಗಳು by santhosh_87
ಉ: ನೆನಪುಗಳು
ಉ: ನೆನಪುಗಳು
In reply to ಉ: ನೆನಪುಗಳು by asuhegde
ಉ: ನೆನಪುಗಳು