ನೆನಪುಗಳೇ ಹೀಗೆ...

ನೆನಪುಗಳೇ ಹೀಗೆ...

ಕವನ

ನೆನಪುಗಳೇ ಹೀಗೆ

ಮಾಸುವುದಿಲ್ಲ

ದಿನ ಬೆಳಗಾದರೆ,

ಒಂದಲ್ಲ ಒಂದು ರೀತಿಯಿಂದ

ನೆನಪಾಗುತದತ್ತಲೇ ಇರುತ್ತವೆ

ಬಾಡದೆ !

 

ನೆನಪುಗಳೇ ಹೀಗೆ

ಸಂತೆಯಲಿ ಕೊಂಡ ಮಾಲಂತೆ

ಜೋಪಾನ ಮಾಡುತ್ತೇವೆ

ಕನಸುಗಳು ಬಿದ್ದರೆ 

ಕುಣಿಯುತ್ತೇವೆ

ನನಸುಗಳಾಗಲೀಯೆಂದು !

 

ನೆನಪುಗಳೇ ಹೀಗೆ

ಮಹಡಿ ಮನೆಯ ಮೆಟ್ಟಿಲುಗಳಂತೆ

ಸಾಧನೆಯೇ ನನ್ನ ಗುರಿ

ಎನ್ನುವವನಿಗೆ

ಮೆಟ್ಟಿಲಾಗುತ್ತವೆ

ಬೆನ್ನ ತಟ್ಟುತ್ತವೆ !

 

ನೆನಪುಗಳೇ ಹೀಗೆ

ಹತ್ತಿರವಿದ್ದಾಗ ಯಾರ ಬಗ್ಗೆಯೂ

ಮೋಹವಿರುವುದಿಲ್ಲ

ದೂರವಾದಂತೆ , ಮತ್ತೆ ಮತ್ತೆ

ನೋಡಬೇಕೆನ್ನುವ 

ಮನೋಭಾವದ 

ಸ್ಥಿತಿ ಉಂಟಾಗುತ್ತದೆ !

 

ನೆನಪುಗಳೇ ಹೀಗೆ

ಒಮ್ಮೆ ಕಳಕೊಂಡರೆ ?

ಮತ್ತೆಂದೂ ಮೂಡದು ಮನದಿ

ಹೃದಯ ವೇದನೆಯೊಳಗೆ

ಸದಾ ಮುಳುಗಿ ಮರೆಯಾಗುವ

ಸೂರ್ಯನಂತೆ !

 

-ಹಾ ಮ ಸತೀಶ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್