ನೆನಪುಗಳ ಹನಿಗಳ ನಡುವೆ ಮಲೆನಾಡಿನ ಮಳೆ

ನೆನಪುಗಳ ಹನಿಗಳ ನಡುವೆ ಮಲೆನಾಡಿನ ಮಳೆ

ಬರಹ

ಮಲೆನಾಡಿನ ಮಳೆಯ ಹನಿಗಳ ನಡುವೆ ನನ್ನ ಬಾಲ್ಯದ ನೆನಪುಗಳನು ಮೆಲುಕು ಹಾಕುತ ಕುಳಿತಿದ್ದೆ,ನನ್ನ ಸ್ನೇಹಿತರ ನಡುವಿನ ಒಡನಾಟ,ಹರಟೆ,ಜಗಳ,ಎಲ್ಲದರ ನೆನಪು ಮಾಸಿ ಹೋಗದಂತೆ ಅಚ್ಚೆಯಾಗಿ ನನ್ನ ಈ ಮನದಲ್ಲಿ ಉಳಿದಿತ್ತು,ಅಂದು ಶನಿವಾರ ಶಾಲೆಗೆ ಮಧ್ಯಾನ ರಜೆ ಇದ್ದರಿಂದ ನಾನು ಮತ್ತು ನನ್ನ ಸ್ನೇಹಿತರು ಮನೆಗೆ ಬೇಗ ಬಂದಿದ್ದೆವು ಅಮ್ಮ ನೀಡಿದ ತಿಂಡಿಯನ್ನು ತಿಂದು ಆಟ ಆಡಲು ಹೊರಗೆ ಬಂದ್ರೆ ಮುಂಗಾರಿನ ಮಳೆ ಸುರುವಾಯಿತು ಆಡಲು ಹೋದ ನಮಗೆ ಎದುರಾದದ್ದು ಈ ಮಳೆ ಹೇಗೋ ಆಟ ಆಡಿ ಮಳೆಯ ನೀರಿನಲ್ಲಿ ಜಾರಿಬಿದ್ದು ಗಾಯ ಮಾಡಿಕೊಂಡ ನೆನಪು ಹಾಗೆ ಇದೆ ಆ ಗಾಯಕ್ಕೆ ನಮ್ಮ ತಂದೆ ಕೋಪದಲ್ಲಿ ಟಿನ್ಚರ್ ಹಾಕಿದಾಗ ನೋವಿನ ನೆನಪು ಮರೆಯಲು ಸಾದ್ಯವಿಲ್ಲ ನಂತರ ಆ ಆಟ ಹುಡುಗಾಟದ ನೆನಪು ಮರೆಯಲು ಸಾದ್ಯವಿಲ್ಲ,ನಂತರ ಹೈಸ್ಕೂಲ್ ನೆನಪು ಮರೆಯಲಾಗದ ನೆನಪು ಯಾಕೆಂದರೆ ನಾನು ಓದಿದ್ದು ಉಡುಪಿಯಲ್ಲಿ ನಾನು ಎಲ್ಲಿಯವರೆಗೂ ಯಾವ ಹುಡುಗಿಯನ್ನು ಮಾತನಾಡಿಸ್ದವನು ಆದರೆ ನನ್ನ ಹೈಸ್ಕೂಲ್ ನಲ್ಲಿ ನಾನು ಮಾತನಾಡಿಸಿದ್ದು ಕೇವಲ ೫ ಹುಡುಗಿಯರನ್ನ ಬರುಬರುತ್ತಾ ಹಾಗೆ ಸ್ನೇಹಿತರಾದೆವು (ಸ್ನೇಹಿತರಾಗಲು ಹಾಗೂ ಪ್ರೀತಿ ಹುಟ್ಟಲು ಮಾತೆಕಾರಣ ಅಲ್ವ ???) ಆಗಲು ಸಹ ಮಳೆಗಾಲ ಪ್ರರಂಬವಾಗಿತ್ತು, ಹಾಸ್ಟೆಲ್ನಲ್ಲಿ ಕಾಲ ಕಾಲಕಳೆಯಲು ಕ್ರಿಕೆಟ್ ಆಟ ಆಡುತಿದೆವು ಎಷ್ಟೇ ಮಳೆ ಬರಲಿ ಆಟ ಆಡುದನ್ನು ನಿಲ್ಲಿಸುತಿರಲಿಲ್ಲ ಆ ಆಟ ನನ್ನ ಕೈ ಮುರಿತ ನೆನೆಸಿಕೊಂಡರೆ ಇಗಲು ಸಹ ಕಣ್ಣಿನಲ್ಲಿ ನೀರು ಜಲದಾರೆಯಾಗಿ ಹರಿಯುತ್ತದೆ ಏನಾದರು -------------ಮಳೆಯಲ್ಲಿ ಮಿಂಚಿಹೋದ ಬಾಲ್ಯದ ನೆನಪು ಇಗಲು ಸಹ ಬರುತ್ತದೆ

:--------:-ಬಚ್ಚಿಟ್ಟ ಭಾವಗಳೆ , ಮುಚ್ಚಿಟ್ಟ ನೆನಪುಗಳೆ ,ಕೊಚ್ಚಿ ಹೋಗಿರಿ ಮನದ ಹುಚ್ಚು ಹೊಳೆಯೊಡನೆ------:-
-------------------------------------------------------------------------------------------------------------------------------------------
ಜೀವನೋದಯದ ಪುಟಗಳನು
ಹಿಂದೆಗೆ ತಿರುವಿದಂತೆಲ್ಲ ಕಂಡದ್ದು
ನೆನಪಿನ ಸ್ವಪ್ನಗಳೇ
ಆಸೆಯ ಬೆಳದಿಂಗಳೇ
ಭಾವನಾಲೋಕದ ಛಾಯೆಯೇ.........
-------------------------------------------------------------------------------------------------------------------------------------------
ಚಿಮಣಿಯಿಂದ
ಬುಸು
ಬುಸು
ಹೊಗೆ
ಒಲೆಯ ಮುಂದೆ
ಕುಕ್ಕರುಗಾಲು ಹಾಕಿದ
ಅಪ್ಪ
ಹೊರಗೆ
ಪಿರಿ
ಪಿರಿ
ಮಳೆ
ಜಾರುವ ಪಾಚಿಹಾದಿ
ವಾರೆ ಸುರುಳಿ
ಕಣ್ಣೊಳಗೆ ಹಸಿರು
ಚಳಿಯ ಧ್ಯಾನಿಸುತ್ತ
ಒದ್ದೆ ಸೌದೆಯ ವಾಸನೆ
ಸೇದುತ್ತ
ಇದ್ದರೆ
ಏನೇನೊ ಜ್ಞಾಪಕ
ತವಕ.

ಪುಟ್ಟ ತರಲೆ ಹುಡುಗಿ
ತುಡುಗು
ಮಾಡುವ
ಹಾಗೆ
ಅ ತ್ತಿಂ ದಿ ತ್ತ
ಗೂರಾಡುವ
ಬಿಳಿಹೊಗೆ
ಮಾಡಿಂದ
ಸುರಿವ
ನೀರಪರದೆ
ಮತ್ತೆಲ್ಲ
ಮೌನವಾದರು
ಮನಕ್ಕೆ
ಮಳೆ
ವೀಣೆ (copy)