ನೆನಪು
ಬರಹ
ಬಿಚ್ಚಿಡುವೆ ಭಾವಗಳ
ಬಿಳಿಯ ಹಾಳೆಯ ಮೇಲೆ
ಮುಚ್ಚಿ ಹೋಗದಿರಲಿ
ನಾ ನಡೆದ ಹಾದಿಯಲಿ
ಒಲ್ಲದ ವಿಷಯಗಳ
ಮನದ ತಳಮಳಗಳ
ಜೊತೆ ಕಟ್ಟಿಟ್ಟು ಒಮ್ಮೆಗೆ
ಎಸೆದು ಬಿಡಲೇ ಅಲ್ಲಿಗೆ
ಸಾಗಿಹದು ಪಯಣ
ತೊರೆದು ಇರುವುದನೆಲ್ಲ
ನಿನ್ನ ನೆನಪುಗಳ ಹೊತ್ತು
ನಿಲ್ಲದೆ ಪ್ರತಿದಿನ, ಪ್ರತಿಕ್ಷಣ