ನೆನೆದವರ ಮನದಲ್ಲಿ...
ಕವನ
ಹಂಸಗಮನೆಯೇ ಮನದ ರಾಧೆಯೆ
ನೆನೆಯ ಒಲವಿನ ಔತಣ
ಉಸಿರ ಹೆಸರಲಿ ನಿನ್ನ ಕರೆಯಲು
ಪುಳಕಗೊಂಡಿತು ಮೈಮನ
ಹೂವ ಪಳಕೆಯ ಬಣ್ಣ ನಾಚಿದೆ
ನೊಂದ ಮನದಲಿ ಕಳವಳ
ನೋವ ಮರೆಯಲು ಬಳಿಗೆ ಬಂದಿಹೆ
ನೀಗು ತನುವಿನ ತಳಮಳ
ಹಂಸ ನಾವೆಯ ಕಡಲ ತೆರೆಯಲಿ
ತೇಲಿ ಸಾಗುವ ಒಲವಿಗೆ
ಸಪ್ತ ಸಾಗರ ಸುಪ್ತ ಹೃದಯವು
ಸಾಕ್ಷಿ ಆಗಲಿ ಗೆಲುವಿಗೆ
ಮುಗಿದ ಭಾವದ ನೆನಪ ಲಹರಿಯು
ಗರಿಯ ಕುಂಚದ ಚಿತ್ರವು
ಬರೆದ ಸಾಲಿನ ಜೀವ ಲೇಖನಿ
ಹಾರಿ ಸೇರಿದೆ ಪತ್ರವು
ಅರಿತ ಬಾಳಲಿ ನುರಿತ ಸಾರಥಿ
ನೀನು ರಾಗದ ಮೂರ್ತಿಯು
ಮನದಿ ಮೂಡಿದ ಪ್ರಣಯ ಕೋಗಿಲೆ
ಉಲಿದು ಹಾರಿದೆ ಎದೆಯಲಿ..
-‘ಮೌನ ರಾಗ’ ಶಮೀರ್ ನಂದಿಬೆಟ್ಟ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್