ನೆಮ್ಮದಿ ಉಳಿಸೂ..
ಕವನ
ದಯೆದೋರು ಮಳೆರಾಯ ನೀ ನಮ್ಮಲಿ
ತೊರೆಯುತ ಮುನಿಸೂ ನೆಮ್ಮದಿ ಉಳಿಸೂ,
ನಮ್ಮನು ಹರಸು||ಪ||
ಸುತ್ತೆಲ್ಲ ನೆರೆ ತುಂಬಿ ನೆಲ ಮುಳುಗಿದೆ
ವಾಸಿಸುವ ಮನೆಯಿಂದು ಧರೆಗುರುಳಿದೆ
ಬದುಕುಳಿಯೆ ಹೊರಬರಲು ಮನವಿದ್ದರೂ
ರಸ್ತೆಗಳು ಉಳಿದಿಲ್ಲ ಸಂಚಾರಕೆ
ಬಹುದೊಡ್ಡ ಬೆಟ್ಟಗಳು ಕುಸಿಯುತ್ತಿವೆ
ಅದರಡಿಗೆ ಜೀವಗಳು ಸಾಕಷ್ಟಿವೆ
ಬರಬೇಡ ನೀನೆಂದು ನಾ ಹೇಳೆನು
ಹಿತವಾಗಿ ನೀ ಸುರಿದು ಪೊರೆ ನಮ್ಮನು
ನದಿಗಳಲಿ ದಡ ಮೀರಿ ಜಲ ಹರಿದಿದೆ
ನೋಡುತಿರೆ ಭಯ ತರುವ ಕೆಂಬಣ್ಣದೇ
ಕೆಲಜನರು ಮಾಡಿರುವ ಅಪರಾಧಕೆ
ಸರ್ವರಿಗೆ ಈ ರೀತಿ ಸಜೆ ಏತಕೇ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ್