ನೆರಳುಗಳು

ನೆರಳುಗಳು

ಕವನ

ಬೆಳಕಿನ ಮಧ್ಯ ತಲೆ ಬಾಗದ
ನೆರಳನ್ನ ನೋಡುತ್ತಿದ್ದಾನೇ ಸೂರ್ಯ

ನಕ್ಷತ್ರಗಳ ಮಧ್ಯ ಬಚ್ಚಿಟ್ಟುಕೊಳ್ಳುವ
ಕತ್ತಲನ್ನು ಬೆಳಗಿಸಲು ನೋಡುತ್ತಿದ್ದಾನೇ ಚಂದ್ರ

ಒಂದೂ ಬೇಕಾಗದ ಭೂಮಿ
ತನ್ನ ಸುತ್ತ ತಾನೇ ತಿರುಗಿಕೊಳ್ಳುತ್ತಿದೆ

ಕೈ ಒಳಗಿನ ರೇಖೆಗಳಿಗೂ, ಹಣೆಯ ಮೇಲಿನ ರೇಖೆಗಳಿಗೂ
ಸೋಲುತ್ತಿರುವ ಜೀವನವನ್ನ
ಅರ್ಧ ಬೆಳಕಿಗೆ, ಅರ್ಧ ಕತ್ತಲಿಗೆ ಅರ್ಪಿಸಿ
ಭೂಮಿಯ ಹಾಗೇ ಇದ್ದುಬಿಡುತ್ತಿದ್ದೀನಿ!

 

Comments