ನೆರಳು

ನೆರಳು

ಬರಹ

ನೆರಳು

ಬಿಡದೆ, ಬೆಂಬಿಡದೆ ಅನುಸರಿಸುತಿದೆ ನನ್ನೊಳಗಿನ ನಾನು
ಕಷ್ಟ ಕಾಲಕ್ಕಾಗುವ ಗೆಳೆಯನಂತೆ, ಗುಟ್ಟುಗಳ ಬೆನ್ನಟ್ಟವನಂತೆ

ಒಮ್ಮೊಮ್ಮೆ ಅನಿಸುವದು, ನೆರಳಲ್ಲವಿದು, ನನ್ನೊಳಗಿನ ನನ್ನಾತ್ಮ
ಇನ್ನೊಮ್ಮೆ, ನನ್ನ ಏಕಾಂತದಿ ಬೆಂಗಾವಲಾಗಿ ಬೆನ್ನಟ್ಟುವ ಪ್ರೇತಾತ್ಮ

ಸುತ್ತುವುದೊಮ್ಮೆ, ಕಾಣಿಸದೆ ಕಾಯಿಸುವದೊಮ್ಮೆ ಕತ್ತಲು ಬೆಳಕಿನ ಆಟದಿ
ವಾಮನನಂತೆ ಕಿರಿದಾಗಿ, ಘಟೋತ್ಗಜನಂತೆ ಅಜಾನುಬಾಹುವಿನೋಪಾದಿ

ಮನಸ್ಸು ವಿಷಮತೆಗೆ, ಮೈ ಚಳಿಗೆ ನಡುಗಿ ಆಗಬಹುದು ಅಸ್ಥಿರ
ಕಷ್ಟ, ಕಾರ್ಪಣ್ಯ, ಮಳೆ, ಕುಳಿರ್ಗಾಳಿ ನೆರಳಿಗಿಲ್ಲ ಯಾವ ಪಂಜರ

ಆಸೆಯ ಬೆನ್ನಟ್ಟಿ ಮನುಜ, ಬಾಚಿರುವುದೆಷ್ಟು, ಕೈಗೆಟುಕ್ಕಿದ್ದ ಹಗಲಿರುಳು
ಅಜ್ನಾನದ ಗೋಡೆಯ ಹೊರಬರದೆ ಹಿಡಿದಿದ್ದು ಬರೀ ಬ್ರಾಂತಿಯ ನೆರಳು