ನೆರಳ ಕಾಣರು

ನೆರಳ ಕಾಣರು

ಕವನ

ಯಾವ ಕರುಣೆಯ ನೆಲೆಯ ಕಂಡೆನೆ

ಕಾವನೆಂಬುದ ತಿಳಿದು ನಡೆದೆನೆ

ಭಾವ ದುಂದುಬಿ ಮೊಳಗಿ ಸಾಗಲು ಹರುಷಗೊಂಡೆನು ಬುವಿಯೊಳು

ನೋವ ಮರೆಯುತ ಕುಳಿತೆ ಹೀಗೆಯೆ 

ದೇವ ಸನಿಹದಿ ಕೈಯ ಪಿಡಿಯಲು

ನಾವೆ ತೀರಕೆ ಸಾವದಾನದಿ ಬಂದು ನಿಂತಿದೆ ನೋಡೆಯ

 

ಮನದಿ ಮರ್ಕಟ ನಾಟ್ಯವಾಡುತ

ತನುವಿನೊಡಲಲಿ ವಿಷವ ಕಕ್ಕುತ

ಬನದ ನಡುವೆಯೆ ಸುಮದ ಕೊರಳನು ಹಿಚುಕಿ ಹಾಕುತ ನಡೆದರು

ಜನರ ತಿಳಿವನು ಮೆಟ್ಟಿ ನಿಲ್ಲುತ

ಬಣಕೆ ಪಂಡಿತ ತಾವೆಯೆನ್ನುತ

ಸನಿಹಯಿರುವನ ದೂರ ತಳ್ಳುತ ತಾವೆ ಹಿರಿಯರುಯೆನ್ನುತ

 

ಅತಿಯುಯೆನಿಸಿತು ಬರೆವ ರೀತಿಯು

ಗತಿಯುಯಿಲ್ಲದೆ ಮತಿಯ ಚೆಲ್ಲುತ

ಮತವೊಂದೆ ದೇಹವರಿತರು ಜಲಸಿ ಬಿಡದೆಲೆ ಸಾಗಲು

ಜತೆಗೆ ನಡೆಯುತಲಿದ್ದ ಸಮಯದಿ

ಕತೆಯ ಕಟ್ಟುತ ಬರೆದು ಛೇಡಿಸೆ

ಹತರು ಜೀವನ ನೆರಳ ಕಾಣರು ಒಲುಮೆ ಬಾಡಲು

 

-ಹಾ ಮ ಸತೀಶ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣಣ

ಚಿತ್ರ್