ನೆಲೆ ಕಾಣಲಿ
ಕವನ
ನೆಲೆ ಕಾಣಲಿ
ಗಿಡ ಮರದಲಿ
ನೆಲ ಹೊಲದ ಬದಿಯಲಿ
ಕದ ಇರುತಲಿ
ಮನೆ ಎದುರಲಿ
ಮನ ಭಯವು ಹೋಗಲಿ
ಇಳಿ ವಯಸಲಿ
ಹೊಸ ಭಯಕೆಯು
ಕುರೆ ತೆರೆಯೆ ತನುವಲಿ
ಹುಸಿ ಮುನಿಸದು
ತಲೆ ತಿನ್ನುತ
ಸವಿ ತಿನಿಸು ಎದುರಲಿ
ಕಿವಿ ಒಳಗಡೆ
ಹುಳು ಹೋಗಲು
ಕುರು ಕಂಡಿತು ಜೀವದಿ
ಕರು ಕಾಣದೆ
ಹಸು ಕೂಗಲು
ತುರು ನಲಿಯೆ ಚೆಂದದಿ
ಹಸಿ ಮಣ್ಣಲಿ
ಕುಶಿ ಎದ್ದಿದೆ
ಇಳಿ ಕನಸು ನನಸಲಿ
ಹುಳಿ ಬಾರದೆ
ಬಿಳಿ ಹರಡಲಿ
ಹಿರಿ ಅರಸ ಬದುಕಲಿ
***
ಹನಿಗಳು
ಇಲ್ಲವುಗಳ
ನಡುವೆ ನಾನಿರುವೆ
ಕಲಿಯುವವ !
ಮರದ ಕೆಳ
ನಾ ಕುಳಿತದ್ದೇ ತಡ
ವಸಂತಕಾಲ !
ಜನವಿದ್ದಾರೆ
ನಿನ್ನ ದೋಚಿದ ಮೇಲೆ
ಮಲಗುವರು!
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್