*ನೇಕಾರ ಗೀತೆ*

*ನೇಕಾರ ಗೀತೆ*

ಕವನ

ಭುವಿಗೆ ಬಂದ ಈಶ್ವರ ಅಂಶ

ಇವನು ಕಾಣಿರೋ..(೨)

ವಸ್ತ್ರವ ನೇಯುವಾ..ನಮ್ಮ ನೇಕಾರ...(೨)

 

ನೇಕಾರ...ಜಗದ ಸಾಕಾರ

ನಾವ್ ಹಾಡಿ ಹೊಗಳೋಣ ಬನ್ನಿ

ನಾವ್ ಧನ್ಯರಾಗೋಣ ಬನ್ನಿ ||

 

ನೂಲಿನಲ್ಲಿ ರಂಗು ರಂಗಿನ ಬಟ್ಟೆ ನೇಯ್ತಾನೆ...

ಆ ಬಟ್ಟೆಯ ಮೈಯ ತುಂಬ ಚಿತ್ರ ಬಿಡಿಸ್ಯಾನೆ..

ನಾರಿಗಾಗಿ ಚೆಂದ ಚೆಂದದ

ಸೀರೆ ನೇಯ್ತಾನೆ..

ಆ ಸೀರೆ ತೊಟ್ಟ ನಾರಿಯು

ಮೆಲ್ಲನೆ ಹಿಗ್ಗ್ಯಾಳೆ..

 

ಮೈಯ ಮುರಿದು...ದಿನವು ದುಡಿದು (೨ಸಲ)

ಜಗದ ಮಾನ ಪ್ರಾಣ ಕಾಯ್ವ

ನಮ್ಮ ನೇಕಾರ..||೧||

 

ಭುವಿಗೆ ಬಂದ ಈಶ್ವರ ಅಂಶ

ಇವನು ಕಾಣಿರೋ..(೨)

ವಸ್ತ್ರವ ನೇಯುವಾ..ನಮ್ಮ ನೇಕಾರ...(೨)

 

ನೇಕಾರ...ಜಗದ ಸಾಕಾರ

ನಾವ್ ಹಾಡಿ ಹೊಗಳೋಣ ಬನ್ನಿ

ನಾವ್ ಧನ್ಯರಾಗೋಣ ಬನ್ನಿ||

 

ಚೂಡಿದಾರ ಶಾಲೆ ಮಕ್ಕಳ

ಬಟ್ಟೆ ನೇಯ್ತಾನೆ..

ಆ ಬಟ್ಟೆಯೊಳಗೆ ತುಂಬಾ ಅವನ ಕನಸು ಕಾಣಿಸ್ಯಾವೆ

ಚಟುಕ್ ಪಟುಕ್ ಎಂಬ ಶಬ್ದ ಮಗ್ಗ ಮಾಡುತಿದೆ

ಆ ಮಗ್ಗ ಶಬ್ದವೇ ಅವನ ಹೃದಯ ಬಡಿತಾವೆ

 

ಬಂದರೇ ಬರ್ರೆವ್ವ..ಸಂತಸ ತರ್ರೆವ್ವ..(೨ ಸಲ)

ನೇಯುವ ಕೈಗೆ ಶಿರವ ಬಾಗಿ

ನಾವು ನಮಿಸೋಣ..||೨||

 

ಭುವಿಗೆ ಬಂದ ಈಶ್ವರ ಅಂಶ

ಇವನು ಕಾಣಿರೋ..(೨)

ವಸ್ತ್ರವ ನೇಯುವಾ..ನಮ್ಮ ನೇಕಾರ...(೨)

 

ನೇಕಾರ...ಜಗದ ಸಾಕಾರ

ನಾವ್ ಹಾಡಿ ಹೊಗಳೋಣ ಬನ್ನಿ

ನಾವ್ ಧನ್ಯರಾಗೋಣ ಬನ್ನಿ||

(ತೇರಾ ಏರಿ ಅಂಬರದಾಗೆ ನೇಸರ ನಗುತಾನೆ...ದಾಟಿ)

-*ಶ್ರೀ ಈರಪ್ಪ ಬಿಜಲಿ*

 

ಚಿತ್ರ್