ನೇಗಿಲು
ನನ್ನ ಕಾಲೇಜಿನಲ್ಲಿಯ ಆಶುಕವನ ಸ್ಪರ್ಧೆಯಲ್ಲಿ ನನಗೆ ಸಿಕ್ಕಿದ್ದು ಮತ್ತು ನಾನು ಗೀಚಿದ್ದು... (ಸಮಯ- 30ನಿಮಿಷಗಳು)
ನೇಗಿಲು
ಅದ್ಯಾವ ಗರ್ಭದಲೀ…
ಅವತರಿಸಿದಳೋ ಈ ಭೂರಮೆ
ಮತ್ತ್ಯಾವ ಮರ್ಮದಲೀ…
ಅವತಾರಿಸಿದಳೋ ಈ ಧರಮೆ
ಕಾಲಚಕ್ರದ ಚಲನೆಯ ವೇಗದಲೀ...
ಋತು ಚಕ್ರದ ಲಲನೆಯ ರಾಗದಲೀ...
ಅವತರಿಸಿದೀರಿ ನೀವು ಮನುಜರು...
ಹೊಸತನಕೆ ಜಾರಿಕೊಳ್ಳುವ ಸನ್ನಾಹದಲೀ…
ಸಿರಿತನಕೆ ಆತುಕೊಳ್ಳುವ ಹುನ್ನಾರದಲೀ...
ಮುನ್ನಡೆದಿದ್ದೀರಿ ನೀವು ಮನುಜರು...
ಅದ್ಭುತ ಸೃಷ್ಟಿಯ ಪಂಚದಲೀ…
ಮಾನವನೆಂಬ ಪರಮ
ಅಚ್ಚರಿಯೆಂಬ ದೃಷ್ಟಿಯ ಕುಂಚದಲೀ
ನೇಗಿಲೆಂಬ ಕರಮ
ಇಳೆಯ ಒಡಲಲ್ಲಿಯ ಫಲವತ್ತತೆಯ…
ಕಳೆಯ ಬುಡದಲ್ಲಿಯ ರಸವತ್ತತೆಯ…
ರೈತನಿಗೆ ಉಣಬದಿಸಿದೆನ್ನೆಲ್ಲಾ ನಾನು…
ಧರೆಯ ಮಡಿಲ ಸೀಳುತ್ತಾ...
ಝರೆಯ ಕುಡಿಲ ಸೀರುತ್ತಾ...
ಆ ಧಾನಿಗಳಿಗೆ ಅನ್ನ ನೀಡಿದೆನ್ನಲ್ಲಾ ನಾನು…
ನೀ ತಿನ್ನುವ ಅನ್ನ…
ಅವ ತಿನ್ನುವ ರಾಗಿ...
ಮತ್ತೊರ್ವ ತಿನ್ನುವ ಜೋಳ… ನನ್ನ ಕರಮದ ಫಲವಲ್ಲವೇನೋ...!!?
ಇತಿ ಪ್ರೀತಿಯ …
ನೇಗಿಲು
Comments
ಉ: ನೇಗಿಲು