ನೇಗಿಲು ನೆಲವ ನೋಡಿತೆ
ಕವನ
ತೆರೆ ತೆರೆಗಳಂತೆ
ಸುಳಿ ಸುಳಿಯ ಅಲೆಗೆ
ಬದು ಬದುಕು ಬರಡು ಆಯ್ತು
ತೆನೆ ತೆನೆಗಳಾಚೆ
ಉಸಿ ಉಸಿರು ಹೋಗೆ
ಮುರು ಮುರುಟಿ ಜೀವ ಹೋಯ್ತು
ಮೋಡ ಮೋಡದೊಳಗೆ
ಸಿಡಿ ಸಿಡಿಲು ಹೊಮ್ಮಿ
ದರೆ ದರೆಗೆ ಚಿಮ್ಮಿ ಬಂತ್ತು
ಗುಡು ಗುಡುಗಿನೊಳಗೆ
ಮಳೆ ಮಳೆಯು ಬಂದು
ಬೆಳೆ ಬೆಳೆಯೆ ನಾಶವಾಯ್ತು
ಒಡ ಒಡಲ ನೋವು
ಬಿರ ಬಿರನೆ ಬರಲು
ಖುಷಿ ಖುಷಿಯು ಹೊರಟು ಹೋಯ್ತು
ಹಸಿ ಹಸಿಯ ಪೈರು
ನೆಲ ನೆಲಕೆ ಒರಗೆ
ಕಣ್ಣ್ ಕಣ್ಣು ನೆಲವ ನೋಡ್ತು
ತಲೆ ತಲೆಯ ಮೇಲೆ
ಮನೆ ಮನೆಯೆ ಬೀಳೆ
ಇರು ಇರುವುದೇಗೆ ಚಿತ್ತ
ಚಿತೆ ಚಿತೆಯವೊಳಗೆ
ಮುಳು ಮುಳುಗೆ ಇರಲು
ಒಲ ಒಲವು ಮಸಣವಾಯ್ತು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
