ನೇಸರ...
ಬರಹ
ಊರಿನಾಚೆ ಏರಿಮ್ಯಾಗೆ..
ಮನದ ಮುಗಿಲ ತೇರಿನಾಗೆ..
ಮೂಡಿಬರುತಾವ್ನೆ ಕೆಂಪು ನೇಸರ
ಎಷ್ಟು ಸುಂದರ... ಆಹಾ... ಊರೆಲ್ಲಾ ಆಗೈತಿ ಕೆಂಪು ಮಂದಿರ...
ಗಿಡದಾಗೆ ಹೂ ಬಿರಿದು ದುಂಬಿಯನ್ನು ಬಳಿ ಕರೆದು
ಗಾಳಿಯಲ್ಲಿ ಸೂಸ್ಯಾವೆ ಕಂಪು ಪರಿಮಳ
ಹಕ್ಕಿಗಳೆಲ್ಲಾ ಹಾಡುತಿವೆ ಇಂಪು ಇಂಚರ
ಬಾನಾಗೆ ಮೂಡಿಸ್ಯಾವೆ ಚಿತ್ತಾರ
ಅಹಾ ಎಂಥ ಸುಂದರ.. ಮೂಡಿಬರುತಾವ್ನೆ ಮೇಲೆ ನೇಸರ...
ಮುತ್ತೈದೆ ಬಿಂದುವಾಗಿ ಹೆಣ್ಣಿಗೆ ವರ
ಕತ್ತಲೆಲ್ಲಾ ತೊಯ್ಯುತಿರಲು ಜಗಕ್ಕೆ ವರ
ಗಿಡಮರದ ಎಲೆಗಳೆಲ್ಲಾ ಉಸಿರಿಂದ ಹಸಿರಾಗಿ
ನೆನೆಯುತಿರಲು ಬಂದ ನೇಸರ..ಅಹಾ ಏಷ್ಟು ಸುಂದರ...
ಜಗಕ್ಕೆಲ್ಲಾ ರವಿಯಾಗಿ...
ಕವಿಗಳಿಗೆ ಸ್ಪೂರ್ತಿಯಾಗಿ..
ಜೀವ ಸಂಕುಲಕ್ಕೆ ವರವಾಗಿ....
ಬಂದ ನೇಸರ... ಅಹಾ ಏಷ್ಟು ಸುಂದರ......