ನೇಸರ‌

ನೇಸರ‌

ಕವನ

ಮುಗಿಲಲಿ ಮೂಡುವ ನೇಸರ‌
ಈ ಜಗಕೆ ನೀನೇ ಆಧಾರ‌
ಪ್ರಕ್ಱುತಿಯಲಿ ನೀ ಬಿಡಿಸೋ ಚಿತ್ತಾರ‌
ವರ್ಣಿ‍ಸಿದ ಕವಿಯೊಬ್ಬ ಹಾಕುತ ಪ್ರಸ್ತಾರ‌

ಹೇ ನೇಸರ !,
ನೀ ಶಕ್ತಿಯ ಸಾಗರ,
ನಿನ್ನೊ0ದಿಗೆನ್ನ ಸ0ಚಾರ‌
ನಿನ್ನ ಬೆಳಕೇ ಸು0ದರ‌
ಅ0ಬರಕೆ ನೀನೇ ಸಿ0ಧೂರ‌

ನೀನಿರ‌ದ ಅ0ಬರ
ಅಳೆಯಲಾರದ ಅ0ತರ‌
ಏನೀ ಸ್ಱುಷ್ಟಿಯ ಸಿ0ಗಾರ‌
ನಿನ್ನ ಹೊಳಪೇ ಶ್ರು0ಗಾರ‌

ನಾ ಕ0ಡ ಕಡಲ ತೀರ‌
ನಿನ್ನ ಒಲವ ಮ0ದಾರ‌
ಬೇಡುವೆ ನಾ ದೇವನಲೊ0ದು ವರ‌
ನಿನ್ನ ಬದುಕಾಗಲೆ0ದು ಬ0ಗಾರ....

Comments