ನೈತಿಕತೆ

ನೈತಿಕತೆ

ಕವನ

ಕರುಳುರಿದು ಕೊಟ್ಟ ಶಾಪ ಹುಸಿಯಾಗದು

ಚಿತ್ರಗುಪ್ತನಿಗೆ ಪಾಪದ ಲೆಕ್ಕ ತಪ್ಪಲಾರದು

ನೈತಿಕತೆ ಇಲ್ಲದಿರೆ ನೆಮ್ಮದಿಯೆ ಇರದು

ಧರ್ಮವು ಎಂದಿಗೂ ದಾರಿ ತಪ್ಪದು

 

ಹೊಗಳಿಕೆ ಬಯಸಿ ಕೋಗಿಲೆ ಹಾಡದು

ಅಪ್ಪಣೆಯ ಬೇಡಿ ಮಯೂರ ನರ್ತಿಸದು

ಮಿಂಚಿಲ್ಲದೆ ಮೋಡವು ಸಿಡಿಲಾಗದು

ಮಳೆಯೊಡನೆ ಇಳೆ ಮುನಿಸು ತೋರದು

 

ಕದನ ಕ್ಷೇತ್ರದಲಿ ಕರುಣೆಗೆ ಎಡೆಯಿರದು

ನಿಜಪ್ರೀತಿಯ ನಡುವೆ ಶಂಕೆ ಸುಳಿಯದು

ನಮ್ಮೊಳಗಿನ ದ್ವೇಷ ಪರರನ್ನು ಸುಡದು

ಅಡಿಪಾಯ ಭಧ್ರವಿರೆ ಛಾವಣಿ ಕುಸಿಯದು.

 

-*ಶಾಂತಾ ಜೆ ಅಳದಂಗಡಿ*

 

ಚಿತ್ರ್