"ನೋಡಿ ಸ್ವಾಮಿ ನಾವಿರೋದೇ ಹೀಗೆ"

"ನೋಡಿ ಸ್ವಾಮಿ ನಾವಿರೋದೇ ಹೀಗೆ"


ಶಾರೂಕ್‌ಖಾನ್ ರನ್ನು ಅಮೇರಿಕದ ವಿಮಾನ ನಿಲ್ದಾಣದಲ್ಲಿ ತಪಾಸಣೆ ಮಾಡುವ ನೆಪದಲ್ಲಿ ಸುಮಾರುಹೊತ್ತು ಕಾಯಿಸಿದರೆಂದು, ಇದರಿಂದ ಭಾರತಕ್ಕೆ ಅವಮಾನವಾಯಿತೆಂದೂ ಕೆಲವು ದೂರದರ್ಶನ ಮಾಧ್ಯಮಗಳು, ಕೆಲವು ವೃತ್ತಪತ್ರಿಕೆಗಳು, ಅಭಿಮಾನಿಗಳು ಬೊಬ್ಬಿಟ್ಟರು. ಅಮೇರಿಕ ಹೀಗೆ ಮಾಡಿರುವುದು ಹೊಸದೇನಲ್ಲ, ಅಲ್ಲವೇ?  ಆದರೆ ನೆನ್ನೆ ಬೆಂಗಳೂರಿನ

 ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಒಬ್ಬ ಅನಾಮಧೇಯ ತಾನು ಸಚಿವ ಅಶೋಕ್ ರವರ ಮಗನೆಂದು ಹೇಳಿಕೊಂಡು ವಿ,ಐ.ಪಿ.

ಪಾಸ್ ಪಡೆದು ಮಲ್ಯ ಪುತ್ರನೊಂದಿಗೆ ಕುಳಿತು ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಿದ್ದಾನೆ.  ಈ ಎರಡರಲ್ಲಿ ಎಷ್ಟು ವ್ಯತ್ಯಾಸವಿದೆ ನೋಡಿ.  ಅಮೇರಿಕ ತನ್ನ ದೇಶದಮೇಲೆ ಆಕ್ರಮಣ ಮಾಡಿದ ಮೇಲೆ ಸೆಕ್ಯೂರಿಟಿ ವಿಷಯದಲ್ಲಿ ಎಷ್ಟು ಎಚ್ಚರದಿಂದಿದೆಯೆಂದರೆ, ಯಾವುದೇ ದೇಶದ,

ಎಷ್ಟೇ ಜನಪ್ರಿಯ ವ್ಯಕ್ತಿಗೂ ಅಲ್ಲಿನ ಕಾನೂನನ್ನು ಸಡಿಲಿಸುವುದಿಲ್ಲ. ಆದರೆ ಇಲ್ಲಿ, ತಾನು ಸಇವನ ಮಗನೆಂದ ಮಾತ್ರಕ್ಕೆ ಯಾವುದೇ ದಾಖಲೆ

ಯನ್ನು ಪರೀಕ್ಷಿಸದೆ ಎಲ್ಲಿಗಾದರೂ ಪ್ರವೇಶಿಸಬಹುದು. ನಮ್ಮ ಭಾರತದ ಹಲವಾರು ಪ್ರದೇಶಗಳ ಮೇಲೆ ಹಲವಾರು ಬಾರಿ ಆಕ್ರಮಣ ನೆಡೆಯುತ್ತಲೇ ಇದೆ. ಆದರೂ ನಮ್ಮವರು ಎಎತ್ತುಕೊಂಡಿಲ್ಲ, ಆದರೆ

ತಮ್ಮ ಕಾರ್ಯದಲ್ಲಿ ನಿಷ್ಟೆಯನ್ನು ಮೆರೆದ ಅಮೇರಿಕವನ್ನು ನಮ್ಮ ಮಾನ್ಯ ಎಸ್.ಎಂ.ಕೃಷ್ಣರೂ ಆಕ್ಷೇಪಿಸುತ್ತಾರೆ.  ಹೇಗಿದೆ ನೋಡಿ.  ಒಟ್ಟಿನಲ್ಲಿ

"ನೋಡೀ ಸ್ವಾಮಿ ನಾವಿರೋದೆ ಹೀಗೆ
 

 

-ಎಂ.ಎಸ್.ಮುರಳಿಧರ್, ಶಿರಾ.

Comments