ನೋಡು ಪಡುವಣ

Submitted by Shreerama Diwana on Mon, 10/12/2020 - 12:23
ಬರಹ

ನೋಡು ಪಡುವಣ 

ಕಡಲ ತೆರೆಯಲಿ

ಸೂರ್ಯ ಕಿರಣವು ಹೊಳೆದಿದೆ 

ನೀರ ಉಬ್ಬರ

ದಲೆಯ ಸೊಬಗಲಿ

ತೀರ ನಾಚುತ ಮಲಗಿದೆ

 

ಪ್ರೀತಿ ಕಂಗಳು

ಮರದ ಮರೆಯಲಿ 

ಮೊದಲ ಮುತ್ತನು ಸವಿದಿದೆ

ಬೆಸುಗೆ ಬಂಧನ

ಉಸಿರ ಶಬ್ದಕೆ

ಒಲವು ಕಚಗುಳಿ ನೀಡಿದೆ 

 

ಅಲ್ಲೆ ಚಿಗುರಿನ

ನಡುವೆ ಕುಳಿತಿಹ

ಕೋಗಿಲೆ ಕೂಹೂ ಎಂದಿದೆ

ಬೆಳಗು ಜಾವದ

ಮೋಡಿ ಮಲ್ಲಿಗೆ

ಸುತ್ತ ಹರಡುತ ನಲಿದಿದೆ

 

ಜಲದ ರಾಶಿಯ 

ಕಂಡು ತಣಿಯಲು

ಸುಖವು ಕನಸಲಿ ತೇಲಿದೆ

ಬಾನ ರಶ್ಮಿಯ 

ಮೋಹ ಸುತ್ತಲು

ಜಗವು ಚೆಲುವನು ಬೀರಿದೆ 

 

-ಹಾ ಮ ಸತೀಶ

 

ಚಿತ್ರ್