ನೋಡು ಪಡುವಣ
ಕವನ
ನೋಡು ಪಡುವಣ
ಕಡಲ ತೆರೆಯಲಿ
ಸೂರ್ಯ ಕಿರಣವು ಹೊಳೆದಿದೆ
ನೀರ ಉಬ್ಬರ
ದಲೆಯ ಸೊಬಗಲಿ
ತೀರ ನಾಚುತ ಮಲಗಿದೆ
ಪ್ರೀತಿ ಕಂಗಳು
ಮರದ ಮರೆಯಲಿ
ಮೊದಲ ಮುತ್ತನು ಸವಿದಿದೆ
ಬೆಸುಗೆ ಬಂಧನ
ಉಸಿರ ಶಬ್ದಕೆ
ಒಲವು ಕಚಗುಳಿ ನೀಡಿದೆ
ಅಲ್ಲೆ ಚಿಗುರಿನ
ನಡುವೆ ಕುಳಿತಿಹ
ಕೋಗಿಲೆಯ ಧ್ವನಿ ಕೇಳಿದೆ
ಉದಯ ಕಾಲದಿ
ಹೂವು ಅರಳುತ
ಸುತ್ತ ಪರಿಮಳ ಹರಡಿದೆ
ಜಲದ ರಾಶಿಯ
ಕಂಡು ತಣಿಯಲು
ಮನವು ಕನಸಲಿ ತೇಲಿದೆ
ಬಾನ ರಶ್ಮಿಯ
ಮೋಹ ಸುತ್ತಲು
ಜಗವು ಚೆಲುವನು ಬೀರಿದೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
