ನೋಪ್ರಾಬ್ಲಂ ಹಾಡಿನ ಹುಡುಗಿ ಬಂದ್ಲು..!

ನೋಪ್ರಾಬ್ಲಂ ಹಾಡಿನ ಹುಡುಗಿ ಬಂದ್ಲು..!

ಶುಬ್ರಾ ಅಯ್ಯಪ್ಪ. ಕೊಡಗಿನ ಕುವರಿ. ಲಕ್ಕ ಚೆನ್ನಾಗಿದೆ. ಅದು ಖುಲಾಯಿಸಿದ್ದು ಕನ್ನಡದಲ್ಲಿಯೇ. ವಜ್ರಕಾಯ ಅಭಿನಯಿಸಿದ ಮೊದಲು. ಪ್ರಥಮ ಅವಕಾಶದಲ್ಲಿಯೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜತೆಗೆ ಅಭಿನಯ. ಈಕೆಗೆ ಚಿತ್ರದಲ್ಲಿ ಇದ್ದದ್ದು ಒಂದೇ ಹಾಡು. ಕೆಲವೇ ಸೀನ್​ ಗಳು. ಆದರೂ, ಶುಬ್ರಾ ಹಿಟ್​. ಚಿತ್ರದ ‘ನೋಪ್ರಾಬ್ಲಂ’ ಹಾಡಿನಿಂದಲೇ ಈ ಬೆಡಗಿ ಫೇಮಸ್. ಈಗ ಎಲ್ಲರೂ ಈ 5.8 ಅಡಿ ಎತ್ತರದ ಹುಡುಗಿಯನ್ನ ನೋಪ್ರಾಬ್ಲಂ ಹುಡುಗಿಯಂತಲೇ ಕರೆಯೋದು.ಸದ್ಯ ಮುಂಬೈ ನಲ್ಲಿಯೇ ಇರೋದು. ಬೆಂಗಳೂರಿಗೂ ಬಂದು ಹೋಗ್ತಾರೆ. ಮೊನ್ನೆ ಹೀಗೆ ಸಿಕ್ಕಿದ್ದರು. ಮಾತಿಗೆಳೆದಾಗ ಒಂದಷ್ಟು ಹಂಚಿಕೊಂಡಿದ್ದಾರೆ. ಆ ಮಾತಿನ ಪುಟ್ಟ ಸಂದರ್ಶನ ಇಲ್ಲಿದೆ. ಓದಿ.
-----
1.
ಶುಬ್ರಾ ಅಯ್ಯಪ್ಪ ಏನ್ ಮಾಡುತ್ತಿದ್ದಾರೆ.?

ನಾನು ಈಗ ಮುಂಬೈನಲ್ಲಿದ್ದೇನೆ. ಮನೆ ಇದೆ. ಅಲ್ಲಿ ಒಬ್ಬಳೆ ಇರೋದು.ಕುಕ್ ಬಂದು ಪ್ರತಿ ದಿನ ಕುಕ್ಕಿಂಗ್ ಮಾಡ್ತಾರೆ.ಕಥಕ್ ಡ್ಯಾನ್ಸ್ ಕಲಿಯುತ್ತಿದ್ದೇನೆ.ಅಭಿನಯದ ತರಬೇತಿನೂ ನಡೀತಿದೆ. ಚಿತ್ರದ ಆಫರ್ಸ್ ಬರುತ್ತಿವೆ. ಮೀಟಿಂಗ್ ನಡೆಯುತ್ತಿವೆ.
ಸದ್ಯ ಮಾಡಲಿಂಗ್ ಮಾಡುತ್ತಿಲ್ಲ. ಅಪ್ಪ-ಅಮ್ಮ ಬೆಂಗಳೂರಲ್ಲಿದ್ದಾರೆ. ಆಗಾಗ ಬಂದು ಹೋಗುತ್ತೇನೆ.
2.
ಶುಬ್ರಾ ಯೋಗಾಸನ ಪ್ರಿಯೇ? ಈಗಲೂ ಟಚ್ ಇದೆಯೆ?

ಯೋಗಾಸನ ನನ್ನ ಆಸಕ್ತಿ. ಒಂದೇ ಒಂದು ದಿನ ಬಿಡೋದಿಲ್ಲ. ಪ್ರತಿ ದಿನ ಯೋಗಾಭ್ಯಾಸ ಮಾಡ್ತೀನಿ. ಬೇರೆಯವರು ಮಾಡಬೇಕು. ಮಾಡ್ತೀರಲ್ಲ.
3.
ವಜ್ರಕಾಯ ಚಿತ್ರದ ನಂತರ ಆಫರ್ಸ್ ಬಂದ್ವಾ ?

ವಜ್ರಕಾಯ ಚಿತ್ರದ ನೋಪ್ರಾಬ್ಲಂ ಹಾಡು ಹೆಸರು ತಂದು ಕೊಟ್ಟಿದೆ. ಎಲ್ಲರೂ ನನ್ನನ್ನ ನೋ ಪ್ರಾಬ್ಲಂ ಹುಡುಗಿ ಅಂತಾನೆ ಕರೆಯೋದು. ಕನ್ನಡದಿಂದ ಒಂದಷ್ಟು ಆಫರ್ಸ್ ಬಂದಿವೆ. ನಿರೀಕ್ಷೆ ದೊಡ್ಡದಿದೆ. ಅದಕ್ಕೆ ಮಾಡಲಿಲ್ಲ.
4.
ಶುಬ್ರಾ ಅಯ್ಯಪ್ಪಗೆ ಕನ್ನಡದಲ್ಲಿ ಫೇವರಿಟ್ ನಾಯಕ ನಟ ಯಾರು?

ಕನ್ನಡದಲ್ಲಿ ನನಗೆ...! ಹಾ ! ಅದು ಒಬ್ಬರೇ. ಮಿಸ್ಟರ್ ಶಿವರಾಜ್ ಕುಮಾರ್. ಆ ಹೀರೋ ನನ್ನ ಮೊದಲ ಚಿತ್ರದ ನಾಯಕ. ಯಾವಾಗಲೂ ಅವರೇ ನನ್ನ ಫೇವರಿಟ್ ಹೀರೋ.

5.
ಶುಬ್ರಾ ಇಷ್ಟ ಪಡೋ ಫುಡ್ ಯಾವುದು..!
ನನಗೆ ಜಾಪನೀಜ್ ಫುಡ್ ಇಷ್ಟ.
6.
ನಿಮ್ಮ ಫೇವರಿಟ್ ಪ್ಲೇಸ್ ಯಾವುದು.?
ಸ್ವಿಜರ್ ಲ್ಯಾಂಡ್. ಕಾರಣ, ಇದು ನಮ್ಮ ಕೂರ್ಗ್ ಥರವೇ ಕೂಲ್ ಕೂಲ್​.

- ರೇವನ್ ಪಿ.ಜೇವೂರ್​​