ನೋವು ತರುವ ನೆನಪು....

ನೋವು ತರುವ ನೆನಪು....

ಬರಹ

ಈ ಘಟನೆ ಕಳೆದು ವರುಷಗಳು ಉರುಳಿವೆಯಾದರೂ ನನ್ನ ನೆನಪಿನಲ್ಲಿ ಆಚ್ಚೊತ್ತಿದಂತಿದೆ.....ಅದು ರಾತ್ರಿ ೮-೮.೩೦ರ ಸಮಯ, ನಾನು ನನ್ನ ಸ್ನೇಹಿತೆ ಸೀಮಾ ಇಬ್ಬರು ಟ್ಯೂಷನ್ ಮುಗಿಸಿ ಮನೆಗೆಗೆ ಹೊರಟ್ಟಿದ್ದೆವು. ನಾನು ಆಗ ಡಿಗ್ರಿ ಮಾಡುತ್ತಿದೆ..... ನಮ್ಮ ಊರು ಉಡುಪಿ, ಅಲ್ಲಿ ಆವಾಗೆಲ್ಲಾ, ೮ ಘಂಟೆ ಹೊತ್ತಿಗೆಲ್ಲಾ ಜನ ಅಷ್ಟಾಗಿ ಓಡಾಡೋದು ಕಡಿಮೆಯಾಗಿ ಬಿಟ್ಟಿರುತ್ತಿತ್ತು. ನಾವಿಬ್ಬರು ನಮ್ಮದೇ ಮಾತಿನಲ್ಲಿ ಮುಳುಗಿರುತ್ತಿದರಿಂದ ಬೇರೆ ಕಡೆ ಗಮನ ಹರಿಸುತ್ತಲೇ ಇರಲಿಲ್ಲ.ನಾವು ಯಾವಾಗಲು ಒಂದೇ ಬಸ್ಸಿಗೆ ಹತ್ತುತ್ತಿದ್ದರಿಂದ ಓರ್ವ ಭಿಕ್ಷುಕ (ತುಂಬಾ ಅಜ್ಜನಾಗಿದ್ದ) ಯಾವಾಗಲು ಬಂದು ೧-೨ ರೂಪಾಯಿ ತೆಗೆದುಕೊಂಡು ಹೋಗುತ್ತಿದ.
ಆ ದಿನ ನಾವು ಓಡಿ ಬಂದರೂ ಯಾವಾಗಲು ಸಿಗುತ್ತಿದ ಬಸ್ ಸಿಗಲಿಲ್ಲ, ಬೇರೆ ಬಸ್ ಹತ್ತಿ ಕುಳಿತೆವು, ಆವಾಗಲೆ ಎಲ್ಲಾ ಸೀಟ್ ಗಳು ಭರ್ತಿಯಾಗಿದ್ದವು. ಅದು ಕೂಡ ಎಲ್ಲಾ ಗಂಡಸರೇ ತುಂಬಿ ಕೊಂಡಿದ್ದರು, ಅದ್ರಲ್ಲೂ ಕೂಡ ಸಲ್ಪ ಕೆಳಸ್ತರದ ಜನರೇ ತುಂಬಿದ್ದರು. ಚಾಲಕನ ಹಿಂಭಾಗದ ಸೀಟ್ ಒಂದೇ ಖಾಲಿ ಇದ್ದದ್ದು, ಸರಿ ಎಂದು ಅದ್ರಲ್ಲಿ ಕುಳಿತು ಮಾತನಾಡಲು ಶುರು ಹಚ್ಚಿಕೊಂಡೆವು. ಬಸ್ ಹೊರಡಲು ಇನ್ನೂ ಸಲ್ಪ ಸಮಯವಿತ್ತು, ಅಷ್ಟರಲ್ಲಿ ಅದೇ ಅಜ್ಜ ಭಿಕ್ಷುಕ ತೂರಾಡುತ್ತಾ ಕಿಟಕಿಯ ಬಳಿ ಬಂದ, ಕಿಟಕಿಯ ಬಳಿ ಸೀಮಾ ಕುಳಿತಿದ್ದಳು.
ಆ ಕಿಟಕಿ ಪೂರ್ತಿ ಮುಚ್ಚಿತ್ತು, ಅಂದರೆ ಗ್ಲಾಸ್, ತೆಗಯಲು ಆಗದೆ ಇರುವಂತಹದು.....ನಾವು ದುಡ್ಡು ಕೈಲಿ ಹಿಡಿದುಕೊಂಡಿದ್ದೇವೆ, ಆದರೆ ಕೊಡಲು ಆಗುತ್ತಿಲ್ಲ......ಆ ಅಜ್ಜ ಮೊದ ಮೊದಲು ದೈನ್ಯತೆಯಿಂದ ಯಾಚಿಸುತ್ತಾ ಇದ್ದವನು ಇದಕ್ಕಿಂದ ಹಾಗೆ ರೋಚ್ಚಿಗೆದ್ದು ಪದೇ ಪದೇ ಆ ಗಾಜಿನ ಕಿಟಕಿಯ ಮೇಲೆ ಜೋರಾಗಿ ಬಾರಿಸುತ್ತಾ ಕಿರುಚಾಡಲು ಆರಂಭಿಸಿದ.....ನಾವಿಬ್ಬರು ಕಂಗಾಲಾಗಿ " ಆ ಕಡೆಯಿಂದ ಬನ್ನಿ" ಎಂದೆವು. ಆ ಅಜ್ಜನಿಗೆ ಏನು ಕೇಳಿಸಿತೋ ಬಿಟ್ಟಿತೋ ಅವನು ಕುಡಿದಿದ್ದ ಅಂತ ಕಾಣಿಸುತ್ತೆ, ಇನ್ನಷ್ಟು ಜೋರಾಗಿ ಕಿರುಚಾಡಿ ಆ ಗಾಜಿನ ಮೇಲೆ ಉಗಿದು....ಹೌದು ಚೆನ್ನಾಗಿ ಉಗಿದು ಅಲ್ಲಿಂದ ಹೋಗಿ ಬಿಟ್ಟ. ನಾನು ಆವಾಗಲೆ ಹೇಳಿದಂತೆ ಆ ಬಸ್ ಜನರಿಂದ ತುಂಬಿ ತುಳುಕುತಿತ್ತು. ಆ ಉಗುಳು ಗಾಜಿನ ಮೇಲೆ ಜಾರುತಿದ್ದಂತೆ ನಮ್ಮ ಇಬ್ಬರ ಕಣ್ಣುಗಳು ತುಂಬತೊಡಗಿದ್ದವು. ಆ ಕಡೆ ಈ ಕಡೆ ಇದ್ದ ಜನಗಳು ಪರಿಹಾಸ್ಯ ಮಾಡಿ ನಗುತ್ತಿದ್ದರು.... ಅವಮಾನ, ನೋವಿನಿಂದ ಇಬ್ಬರು ತಲೆ ತಗ್ಗಿಸಿ ಕೂತೆವು, ನನಗೆ ಅವಳ ಮುಖ ನೋಡುವ ಧೈರ್ಯ ಇರಲಿಲ್ಲ, ನಾನು ನೋಡಿದರೆ ಇಬ್ಬರು ಅಳುತ್ತೇವೆ ಎಂದು. ಅಷ್ಟರಲ್ಲಿ ಬಸ್ ಹೊರಟಿತು. ಬಸ್ ಸ್ಟ್ಯಾಂಡ್ ಇಂದ ಸಲ್ಪ ದೂರ ಹೋದಂತೆ ಅವಳು ಕೇಳಿದಳು " ನಾವು ಏನು ಹೇಳಿದೆವು ಅವನಿಗೆ, ಈ ಕಡೆ ಬಾ ಅಂತ ತಾನೇ ಅಷ್ಟಕ್ಕೇ ಅವನು ಈ ತರಹ ಮಾಡಿದ ನೋಡು " ಅಂತ. ಅವಳ ಮಾತಲ್ಲಿ ನೋವು ಹೆಪ್ಪುಗ ಟ್ಟಿತು. ನಾನೇನು ಮಾತಾನಡಲು ಸಾಧ್ಯವಾಗಲಿಲ್ಲ, ನನ್ನ ಗಂಟಲು ಕಟ್ಟಿತ್ತು, ನಾನೋ ಮಾತೆತ್ತಿದರೆ ಅಳುವ ಜಾತಿಯವಳು. ಆದರೆ ಈಗ ನಾನು ಅತ್ತರೆ ಕೆಲಸ ಕೆಡುತ್ತದೆ ಎಂದುಕೊಂಡು " ಇರಲಿ ಬಿಡು ಸೀಮಾ" ಎಂದೆ. ಅಷ್ಟರಲ್ಲಿ ಬಸ್ ೨ ನೇ ಸ್ಟಾಪ್‌ಗೆ ಬಂದು ನಿಂತಿತ್ತು. ನಮ್ಮ ಸ್ಟಾಪ್‌ಗೆ ಇನ್ನೂ ೧೦ ನಿಮಿಷವಿತ್ತು, ಆದರೆ ನಾನು ಏಳು ಸೀಮಾ ಎಂದವಳೇ ಆ ಸ್ಟಾಪ್ ನಲ್ಲಿ ಇಳಿದು ಬಿಟ್ಟೆ, ಅವಳು ನನ್ನ ಒಟ್ಟಿಗೆ ಇಳಿದು ಬಿಟ್ಟಳು. ಅಲ್ಲೇ ಇದ್ದ ರಿಕ್ಷ ಹತ್ತಿ ಕುಳಿತೆವು. ರಿಕ್ಷದಲ್ಲಿ ಕುಳಿತದ್ದೇ ತಡ ಅವಳು ಬಿಕ್ಕಿ ಅಳಲಾರಂಬಿಸಿಡಳು, ನಿಜವಾಗಲೂ ನೋಡಿದರೆ ತುಂಬಾ ಗಟ್ಟಿ ಹುಡುಗಿ ಅವಳು, ಅವಳ ಸ್ಥಿತಿ ಹಾಗಾದರೆ ನನ್ನ ಬಗ್ಗೆ ಯೋಚಿಸಿ..... ನಾನು ತುಟಿ ಕಚ್ಚಿ ಅಳು ನುಂಗಿ ಅವಳನ್ನು ಅಪ್ಪಿ ಹಿಡಿದೆ. ನಾವು ಅವಳ ಮನೆ ಹತ್ತಿರ ಇಳಿದೆವು. ನನ್ನ ಮನೆಗೆ ಅಲ್ಲಿಂದ ೫ ನಿಮಿಷ ದೂರವಿತ್ಟು ಹಾಗಾಗಿ ಅಲ್ಲಿಗೆ ನನ್ನ ತಂದೆಯವರು ನನ್ನನ್ನು ಯಾವಾಗಲು ಕರೆದುಕೊಂಡು ಹೋಗಲು ಬರುತ್ತಿದ್ದರು, ಆ ದಿನ ಕೂಡ ಬಂದಿದ್ದರು. ನಾನು ಅವಳಿಗೆ ಬೈ ಹೇಳಿ ತಂದೆ ಕಡೆ ಹೆಜ್ಜೆ ಹಾಕುತ್ತಿದಂತೆ ಅಳಲಾರಂಭಿಸಿದ್ದೆ.

ನನಗೆ ಯಾವಾಗಲು, ಆಲ್‌ಮೋಸ್ಟ್ ೧೦ ವರ್ಷ ಆದರೂ ಕಾಡುವ ಪ್ರಶ್ನೆ ಇದು: - ಆ ಮನುಷ್ಯ ಹಾಗೇಕೆ ವರ್ತಿಸಿದ?

ನಾವಿಬ್ಬರು ಇವಾಗಲೂ ತುಂಬಾ ಒಳ್ಳೇ ಸ್ನೇಹಿತೆಯರು...

ಈವರೆಗೂ ಆ ನೋವು ನಮ್ಮಿಬ್ಬರನ್ನೂ ಕಾಡುತ್ತಿದೆ..ಮೊನ್ನೆ ಮೊನ್ನೆ ತಾನೇ ಮಾತಿನಲ್ಲಿ ಈ ವಿಷಯ ಬಂತು....ಆವಾಗ ಮತ್ತೆ ನಮ್ಮ ಮನಸ್ಸುಗಳು ಅದೇ ನೋವು ತಿಂದ ಅನುಭವ ಆಯಿತು...

ಇದು ನನ್ನ ಮೊದಲ ಬರಹ....ತಪ್ಪಿದರೆ ಮನ್ನಿಸಿ. ನಿಮ್ಮ ಅಭಿಪ್ರಾಯ ತಿಳಿಸಿ.