ನ್ಯಾನೊ ಕಥೆ - ಬದುಕು ದೊಡ್ಡದು
ಕ್ಯಾನ್ಸರ್ ರೋಗದಿಂದ ಬಲುವಾಗಿ ಬಳಲುತ್ತಿದ್ದ ವ್ಯಕ್ತಿಯ ಕಿವಿಗೆ ಪ್ರೇಮ ವಿಫಲವಾಗಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕಿವಿಗೆ ಬಿತ್ತು. ನನಗೆ ಬದುಕುವ ಆಸೆಯಿದೆ ಆದರೆ ಅವಕಾಶಗಳು ಕಡಿಮೆ. ಈ ಯುವಕ ಬದುಕಲು ವಿಪುಲ ಅವಕಾಶವಿದ್ದರೂ ಚಿಕ್ಕ ವಿಷಯಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎಂಥಹ ವಿಪರ್ಯಾಸವೆಂದು ಮನದಲ್ಲೇ ಮರುಗಿದನು.
-ನಿರಂಜನ ಕೇಶವ ನಾಯಕ, ಶಿಕ್ಷಕ, ಮಂಗಳೂರು.
ಚಿತ್ರ ಕೃಪೆ: ಇಂಟರ್ನೆಟ್ ತಾಣ