ನ್ಯಾನೋ ಕತೆ - ಮುಗ್ಧ ಬಾಲಕಿ

ನ್ಯಾನೋ ಕತೆ - ಮುಗ್ಧ ಬಾಲಕಿ

ಮೋಹಿನಿಯು ಅವಳ ಅಪ್ಪ ಅಮ್ಮನ ಪ್ರೀತಿಯ ಮಗಳಾಗಿದ್ದಳು. ಹಾಗೆಯೇ ಮುಗ್ಧ ಬಾಲಕಿಯೂ ಆಗಿದ್ದಳು. ಮೋಹಿನಿ ಚಿಕ್ಕ ಮಗುವಾಗಿರುವಾಗಲೇ ಸಂಗೀತ ಕೇಳುವುದು, ಹಾಡುವುದು, ನೃತ್ಯ ಮಾಡುವುದು ಇತ್ತು. ಕಲಾ ಪ್ರೇಮಿ ಆಗಿದ್ದಳು. ಆದರೆ ಶಾಲೆಯಲ್ಲಿ ಅವಳು ಏನು ತಿಳಿಯದ ರೀತಿಯಲ್ಲಿ ವರ್ತಿಸುತಿದ್ದಳು. ಗುರುತಿಸದೇ ಇದ್ದ ಕಾರಣ ಅವಕಾಶ ಸಿಗುತಿರಲಿಲ್ಲ. ಓದಲು ಜಾಣೆ ಆಗಿದ್ದಳು. ಒಂದು ದಿನ  ಕಲೆಯಲ್ಲಿಯೂ ಆಸಕ್ತಿ ಹೊಂದಿರುವುದನ್ನು ಕ್ಲಾಸ್ ಮೇಸ್ಟ್ರು ಅರಿತರು. ಅಂದಿನಿಂದ ಅವಳು ಕಲಾವಿದೆಯಾಗಿ ಬೆಳೆದಳು.

-ಸುಭಾಷಿಣಿ ಚಂದ್ರ, ಕಾಸರಗೋಡು

ಚಿತ್ರ ಕೃಪೆ: ಇಂಟರ್ನೆಟ್ ತಾಣ