ನ್ಯಾನೋ ಕಥೆ - ಅರಿವು

ನ್ಯಾನೋ ಕಥೆ - ಅರಿವು

ರಮೇಶನ ಕೋಪ ನೆತ್ತಿಗೇರಿ “ಅಮ್ಮಾ, ಒಟ್ಟಿಗಿರಲು ಸಾಧ್ಯವಿಲ್ಲ, ಎಲ್ಲಿಬೇಕಾದರೂ ಹೋಗಿ” ಹೇಳಿದ. ಇದ್ದ ಒಬ್ಬ ಮಗ ಸೊಸೆಯ ಕಾರಣಕ್ಕೆ ಹೀಗಾದ ಎಂದು ಸಂಕಟಪಟ್ಟು, ವೃದ್ಧಾಶ್ರಮಕ್ಕೆ ಸೇರೋಣ ಎಂದರು ಪತಿಯ ಹತ್ತಿರ. ಮಗ ಕಛೇರಿಗೆ  ಹೊರಟ ಬೆನ್ನಿಗೆ ಸೊಸೆ ಪ್ರಜ್ಞೆ ತಪ್ಪಿ ಬಿದ್ದವಳನ್ನು, ಆಸ್ಪತ್ರೆಗೆ ಒಯ್ದರು ಅತ್ತೆ ಮಾವ. ಪರೀಕ್ಷೆ ಮಾಡಿದಾಗ ಕ್ಯಾನ್ಸರ್ ಎಂದು ತಿಳಿಯಿತು. ಅತ್ತೆ ಮಾವನ ಕಾಲಿಗೆರಗಿ,'ಸಹಬಾಳ್ವೆಯ ಅವಶ್ಯಕತೆ ಗೊತ್ತಾಯಿತು ಕ್ಷಮಿಸಿ, ತಪ್ಪಿನ ಅರಿವಾಯಿತು’ ಎಂದಳು.

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ