ನ್ಯಾನೋ ಕಥೆ - ಕಾರಣ... ಯಾರು ?!

ನ್ಯಾನೋ ಕಥೆ - ಕಾರಣ... ಯಾರು ?!

ಮೌನವಾಗಿದ್ದ ಮಸಣದಲ್ಲಿ ಒಮ್ಮಿದೊಮ್ಮೆಲೆ ಆಕ್ರಂದನ ಆಲಾಪ. ಎಲ್ಲರೂ ಸೇರಿದರು. ಪ್ರೇಮಿಗಳ ರೂಪದಲ್ಲಿ ಇಹಲೋಕ ತ್ಯಜಿಸಿದವರ ಸಹಿತ. ಸುತ್ತಲೂ ನೀರವ ಮೌನ ಮುರಿದಿತ್ತು. ಯುವ ಉತ್ಸಾಹಿ ಯುವಕ ಯುವತಿಯ ಹೆಣಗಳು ಹೂವಿನಿಂದ ಅಲಂಕೃತಗೊಂಡು ಸ್ಮಶಾನದಲ್ಲಿ ಸುಮ್ಮನೆ ಮಲಗಿದ್ದವು .

ಕಾರಣ ಯಾರು ? ಜಾತಿಯ ಅರಿಯದೆ ಯೌವನದ ಹುಚ್ಚಿನಲ್ಲಿ ಸೆಳೆತಕ್ಕೆ ಒಳಗಾದವರದ್ದೋ ? ಜಾತಿಯೇ ಪರಮ ದೈವ ಎನ್ನುವ ಹಿರಿಯರದ್ದೋ ? ಜಾತಿಯ ಬೆಂಬಲಿಸುವ ಸಮಾಜದ್ದೋ ? ಎಲ್ಲದ್ದಕ್ಕೂ ಜಾತಿಯೇ ಬೇಕೆನ್ನುವ ಪ್ರಜಾಪ್ರಭುತ್ವ ಸರಕಾರದ ಕಾನೂನುಗಳದ್ದೋ ? ಯಾರದ್ದು ?!

-ಹಾ ಮ ಸತೀಶ