ನ್ಯಾನೋ ಕಥೆ - ಕ್ಷಣ ಕಾಲ

ನ್ಯಾನೋ ಕಥೆ - ಕ್ಷಣ ಕಾಲ

ಸದಾ ವಟಗುಟ್ಟುವ ಕಪ್ಪೆ ಹೂವೊಂದನ್ನು ನೋಡಿ ಜೋರಾಗಿ ನಗುತ್ತಿತ್ತು. "ಪಾಪ! ನಿನ್ನದು ತೀರಾ ಅಲ್ಪ ಆಯುಷ್ಯ. ಬೆಳಿಗ್ಗೆ ಅರಳಿ ಸಂಜೆ ಮುದುಡುತ್ತೀಯ ನೀನು. ನಿನ್ನ ಬದುಕಿಗೆ ಅರ್ಥವಿದೆಯೇ?" ಎಂದು ಪ್ರಶ್ನಿಸಿ ಹೂವನ್ನು ಹಿಯಾಳಿಸುತ್ತಿತ್ತು. ಹೂವು ಮುಗುಳ್ನಕ್ಕು "ನಾನು ಇರುವಷ್ಟು ಕಾಲ ಘಮವನ್ನು ಸೂಸಿ ಮನಸ್ಸಿಗೆ ಉಲ್ಲಾಸ ನೀಡುತ್ತೇನೆ. ನಿನ್ನ ಹಾಗೆ ಜೀವನ ಪರ್ಯಂತ ವಟಗುಟ್ಟುತ್ತಾ ಯಾರ ಶಾಂತಿಗೂ ಭಂಗ ತರುವುದಿಲ್ಲ" ಎಂದು ನುಡಿಯಿತು. ಕಪ್ಪೆಗೆ ಈ ಮಾತುಗಳು ಚಾಟಿಯ ಏಟನ್ನೇ ನೀಡಿದವು. ಮತ್ತೆಂದೂ ಕಪ್ಪೆ ಹೂವಿನ ತಂಟೆಗೆ ಹೋಗಲಿಲ್ಲ.

ಹೌದಲ್ಲವೇ!! ನಾವು ಬದುಕಿರುವಷ್ಟು ಕಾಲ ಪರರಿಗೆ ಉಪಕಾರ ಮಾಡದಿದ್ದರೂ ಅಪಕಾರ ಮಾಡದೇ ಬದುಕುವುದು ಉತ್ತಮ.

-ನಿರಂಜನ ಕೇಶವ ನಾಯಕ, ಶಿಕ್ಷಕ, ಮಂಗಳೂರು.

ಚಿತ್ರ ಕೃಪೆ: ಇಂಟರ್ನೆಟ್ ತಾಣ