ನ್ಯಾನೋ ಕಥೆ- ಚಂದಿರನ ಮೌನ ನಗು
ಬುದ್ಧ ಪೂರ್ಣಿಮೆಯ ದಿನ ಶ್ಯಾವಂತಿಗೆ ಶ್ಯಾಮನೊಂದಿಗೆ ಸಪ್ತಪದಿ ತುಳಿದ ಸಂಭ್ರಮ. ಮೊದಲ ದಿನದ ಇರುಳಿನ ನವಿರಾದ ನೆನಪುಗಳ ಗ್ರಹಿಸಿ ಕೆನ್ನೆ ಕೆಂಪೇರುತ್ತಿತ್ತು. ಸಜ್ಜೆ ಮನೆಯಲ್ಲಿ ಹೆಂಗಳೆಯರ ಕಲರವ ಕರ್ಣಾನಂದ, ತನುವೆಲ್ಲ ಪುಳಕ. ತಾಯಿಯಿತ್ತ ಕೇಸರಿ ಹಾಲು ಹಿಡಿದು ಹೋದವಳ ಸಂತಸ ಜರ್ರನೆ ಇಳಿಯಿತು. ಬರೆದಿಟ್ಟ ಪತ್ರದ ಒಕ್ಕಣೆ “ಜೀವನದಲ್ಲಿ ಜಿಗುಪ್ಸೆ, ಮನಸ್ಸಿಲ್ಲದ ಮದುವೆ, ಶಾಂತಿ ಅರಸಿ ಹೋಗುತ್ತಿರುವೆ” ಕಿಟಕಿಯಾಚೆ ಬಾನ ಚಂದಿರನ ಮೌನ ನಗುವಿನ ಮೊಗ ಶ್ಯಾವಂತಿಗೆ ಕಂಡಿತು.
-ರತ್ನಾ ಕೆ.ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ