ನ್ಯಾನೋ ಕಥೆ - ನಗುವು ಬರುತಿದೆ
ಆ ದಿನ ‘ಪ್ರೇಮ’ ವೆಂದು ಶಿಕ್ಷಕಿ ತರಗತಿಯಲ್ಲಿ ಹೇಳಿದ ತಕ್ಷಣ ಅನೇಕ ವಿದ್ಯಾರ್ಥಿಗಳು ನಗಲಾರಂಭಿಸಿದರು. ಶಿಕ್ಷಕಿಗೆ ವಿದ್ಯಾರ್ಥಿಗಳ ನಗುವಿಗೆ ಕಾರಣ ತಕ್ಷಣ ಹೊಳೆಯಲಿಲ್ಲ. ಮನೆಗೆ ಬಂದ ತರುವಾಯ ಶಿಕ್ಷಕಿ ವಿದ್ಯಾರ್ಥಿಗಳ ನಡವಳಿಕೆಗೆ ಕಾರಣವೇನೆಂದು ಅವಲೋಕಿಸತೊಡಗಿದರು. ಇಂದಿನ ಮಾಧ್ಯಮಗಳು ಸುಂದರ ಪ್ರೇಮ ಭಾವದ ಅರ್ಥವನ್ನೇ ಬದಲಿಸಿವೆ. ಪ್ರೇಮವೆಂಬ ಪದವನ್ನು ಇಂದಿನ ಯುವಜನತೆ ಕೇವಲ ಒಂದೇ ಆಯಾಮದಲ್ಲಿ ನೋಡುತ್ತದೆ.ಪ್ರೇಮ ಕಾಮಕ್ಕೆ ಪರ್ಯಾಯವಾದ ಪದವಾಗಿಬಿಟ್ಟಿದೆ! ಇದೆಂತಹ ವಿಪರ್ಯಾಸವೆಂದು ಭಾವಿಸಿ ಶಿಕ್ಷಕಿ ಸುಮ್ಮನಾದರು!
-ನಿರಂಜನ ಕೇಶವ ನಾಯಕ, ಮಂಗಳೂರು