ನ್ಯಾನೋ ಕಥೆ - ಪಕ್ಕದ ಸೀಟ್

ನ್ಯಾನೋ ಕಥೆ - ಪಕ್ಕದ ಸೀಟ್

ನಿನ್ನೆ ಕಾಲೇಜಿನ ತರಗತಿಯನ್ನು ಮುಗಿಸಿಕೊಂಡು ಬಸ್ಸಿಗಾಗಿ ಕಾಯುತ್ತಿದ್ದೆ. ಆ ಸಮಯದಲ್ಲಿ ಶಿಕ್ಷಕಿಯೊಬ್ಬರು ಸಹ ಅದೇ ಬಸ್ಸಿಗಾಗಿ ಕಾಯುತ್ತಿದ್ದರು. ನನ್ನ ಗೆಳತಿಯು ಅವರ ಬಗ್ಗೆ ಅದೆಷ್ಟೋ ಒಳ್ಳೆಯ ಮಾತುಗಳನ್ನು ಹೇಳಿಕೊಂಡಿದ್ದಳು. ಇಷ್ಟು ದಿನಗಳ ಪಯಣದಲ್ಲಿ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ನೋಡುತ್ತಾ ಪಯಣ ಮುಂದುವರೆಯುತ್ತಿತ್ತು. ಆದರೆ ನಿನ್ನೆಯ ಪಯಣವು ವಿಶೇಷವಾಗಿತ್ತು. ಏಕೆಂದರೆ ಪಕ್ಕದ ಸೀಟಿನಲ್ಲೇ ಆ ಶಿಕ್ಷಕಿಯಿದ್ದರು. ಅವರೊಂದಿಗೆ ಮಾತನಾಡುತ್ತಾ ಪಯಣ ಮುಂದುವರೆಯಿತು. ತರಗತಿಯಲ್ಲಿ ಪಾಠದ ಜೊತೆಗೆ ವಿವಿಧ ಚಟುವಟಿಕೆಗಳನ್ನು ಮಾಡುತ್ತಾ ವಿದ್ಯಾರ್ಥಿಗಳಲ್ಲಿ ವಿದ್ಯೆಯ ಮೇಲಿರುವ ಆಸಕ್ತಿಯನ್ನು ಗಟ್ಟಿಗೊಳಿಸಿದರು. ಅವರ ಪ್ರತಿಯೊಂದು ಮಾತುಗಳಲ್ಲಿ ಸ್ಪಷ್ತತೆಯಿತ್ತು. ನಮ್ಮ ಸುತ್ತಲಿನ ವಾತಾವರಣವು ಹೇಗಿರುತ್ತದೆಯೋ ಅದೇ ರೀತಿಯಾಗಿ ನಮ್ಮ ವಾತಾವರಣವು ಬೆಳೆಯುತ್ತದೆ. ಅವರ ಮುಖದಲ್ಲಿನ ನಗು, ಮತ್ತೊಬ್ಬರಲ್ಲಿರುವ ನೋವನ್ನು ಅಳಿಸಿ ನಗುವಿನ ಕಲೆಯನ್ನು ಹರಡಿಸಿದರು. ಅವರ ಸಮಾಧಾನದ ಮಾತುಗಳು ಎಲ್ಲರಲ್ಲೂ ಖುಷಿ ತರುತ್ತಿತ್ತು. ಜೀವನದ ದುಃಖಗಳನ್ನು ಅವರಲ್ಲಿ ಹೇಳಿಕೊಂಡಾಗ ಪ್ರತೀ ಬಾರಿಯೂ ಪರಿಹಾರ ಸಿಗುತ್ತದೆ ಎಂಬರ್ಥವಲ್ಲ, ಅವರಲ್ಲಿ ಹೇಳಿಕೊಂಡಾಗ ಅವರ ಆ ಮಾತುಗಳು ಮನಸ್ಸಿಗೆ ನೆಮ್ಮದಿ ತರುತ್ತಿತ್ತು. ಇಂತಹ ಶಿಕ್ಷಕರು ನಮ್ಮೆಲ್ಲರ ಜೀವನದಲ್ಲಿಯೂ ಸಹ ಇದ್ದರೂ ಅವರೆಲ್ಲರ ಶ್ರಮ, ಪ್ರೋತ್ಸಾಹವನ್ನು ಗುರುತಿಸುವಲ್ಲಿ ನಾವು ಗಮನಹರಿಸಲೇಬೇಕು.

-ಮುಹಮ್ಮದ್ ನಶಾತ್

ಚಿತ್ರ ಕೃಪೆ: ಇಂಟರ್ನೆಟ್ ತಾಣ