ನ್ಯಾನೋ ಕಥೆ -*ಪರಿಹಾರ*

ನ್ಯಾನೋ ಕಥೆ -*ಪರಿಹಾರ*

ಊರಿನ ಸಾಹುಕಾರ ಭೀಮಣ್ಣನ ಮಗಳಿಗೆ ಮದುವೆ ಸಂಭ್ರಮ. ಕತ್ತಿಗೆ ಮೂರು ಗಂಟು ಬಿದ್ದರೆ ಸಾಕೆಂದು ಮಗಳು ಶಾಲಿನಿ ಚಡಪಡಿಸುತ್ತಿದ್ದಳು. ಕೊರೋನಾ ಮಹಾಮಾರಿಯ ಆರ್ಭಟಕ್ಕೆ ಗೌಜಿಗದ್ದಲಗಳಿಗೆ ತೆರೆಬಿತ್ತು. ಆಡಂಬರದ ಕನಸು ಕಾಣುತ್ತಿದ್ದ ಸಾಹುಕಾರರು ಬಹಳ ಸರಳತೆಯಲ್ಲಿ ವಿವಾಹವನ್ನು ನೆರವೇರಿಸಿದರು. ವರ ರಾಕೇಶ್ ಕತ್ತಿಗೆ ತಾಳಿ ಕಟ್ಟಿದನು. ಐದು ನಿಮಿಷ ಜಾರಿದ ಪರಿಣಾಮಕ್ಕೆ ‘ಪರಿಹಾರ’ ಸಿಕ್ಕಿತೆಂದು ನಿಟ್ಟುಸಿರು ಹೊರಚೆಲ್ಲಿದಳು ಶಾಲಿನಿ.

-ರತ್ನಾ ಕೆ.ಭಟ್, ತಲಂಜೇರಿ