ನ್ಯಾನೋ ಕಥೆ -ಪ್ರಕೃತಿಯ ಧರ್ಮ-ಕರ್ಮಗಳು

ನ್ಯಾನೋ ಕಥೆ -ಪ್ರಕೃತಿಯ ಧರ್ಮ-ಕರ್ಮಗಳು

ಹಾವು ಕಪ್ಪೆಯನ್ನು ಹಿಡಿದು ತಿನ್ನುವುದನ್ನು ಕಂಡು ಮಗು ಮಹೇಶ ಅಯ್ಯೋ ಪಾಪದ ಕಪ್ಪೆ ಬಲಿಯಾಗುತ್ತಿದೆಯೆಂದು ಮರುಗುತ್ತಿದ್ದನು. ಅಲ್ಲಿಗೆ ಬಂದ ಅವರಜ್ಜ ಒಂದು ಜೀವಿ ಬದುಕಲು ಇನ್ನೊಂದರ ಅಳಿವು ಅನಿವಾರ್ಯ ಅದು ‘ಪ್ರಕೃತಿಯ ಧರ್ಮ’ ವೆಂದು ತಿಳಿಸಿದರು. ಅದೇ ಕಪ್ಪೆಯ ಜೀವವೇಕೆ ಬಲಿಯಾಗಬೇಕೆಂದು ಮಹೇಶ ಮರುಪ್ರಶ್ನೆಯಿತ್ತಾಗ ‘ಕರ್ಮ ಫಲಗಳು’ ಮುಗಿದ ಮೇಲೆ ಜೀವ ಅಳಿಯಲೇಬೇಕೆಂದು ಅವರಜ್ಜ ಮಾರ್ಮಿಕವಾಗಿ ನುಡಿದರು!

-ನಿರಂಜನ ಕೇಶವ ನಾಯಕ, ಮಂಗಳೂರು.

ಚಿತ್ರ ಕೃಪೆ: ಇಂಟರ್ನೆಟ್ ತಾಣ