ನ್ಯಾನೋ ಕಥೆ- *ಮಗನ ಮಾತು*

ನ್ಯಾನೋ ಕಥೆ- *ಮಗನ ಮಾತು*

ರಾಜು ಆರಂಕೆಯ ಸಂಬಳ ಪಡೆಯುವ ಉತ್ತಮ ಉದ್ಯೋಗದಲ್ಲಿದ್ದು, ಪತ್ನಿ ಮಗನೊಂದಿಗೆ, ಪ್ರತ್ಯೇಕವಾಗಿ ಇದ್ದ. ಊರಿನ ತೋಟ ಮನೆಯಲ್ಲಿ ವಯಸ್ಸಾದ ಹೆತ್ತವರಿದ್ದರು. ಆಕಸ್ಮಿಕವಾಗಿ ರಾಜುವಿನ ತಂದೆ ಜಾರಿಬಿದ್ದು ಮಲಗಿದಲ್ಲೇ ಆದರು. ಪತ್ನಿ ಮಗನೊಂದಿಗೆ, ಕಛೇರಿಗೆ ರಜೆ ಬರೆದು ಊರಿಗೆ ಬಂದು ಅಪ್ಪನ ಸ್ಥಿತಿ ನೋಡಿದ ರಾಜು ಕಂಗಾಲಾದ. ಪತ್ನಿ ರೇವತಿಗಂತೂ ವೃದ್ಧರ ಮೇಲೆ ಅಸಡ್ಡೆ. ಮನೆಯ ಹಿಂಬದಿಯ ಕೊಟ್ಟಿಗೆಯ ಒಂದು ಕೋಣೆಯಲ್ಲಿ ಅಪ್ಪನಿಗೆ ಮಲಗಲು ವ್ಯವಸ್ಥೆ ಮಾಡಿದ ಪತ್ನಿಯ ಮಾತು ಕೇಳಿ. ನಿತ್ಯವೂ ತೆಂಗಿನ ಗೆರಟೆಯಲ್ಲಿ ಕಾಫಿ ಕುಡಿಯಲು ಕೊಡುತ್ತಿದ್ದ. ಒಂದು ದಿನ ಮಗನೂ ಜೊತೆಗೆ ಬಂದವನು ಇದನ್ನೆಲ್ಲಾ ಅವಲೋಕಿಸುತ್ತಿದ್ದ. ರಾಜು, 'ಏ ಪುಟ್ಟ, ಈ ಗೆರಟೆಯನ್ನು ಬಿಸಾಡು' ಎಂದಾಗ,  'ಇಲ್ಲ ಅಪ್ಪ, ಸ್ವಚ್ಛ ಮಾಡಿ  ಒಣಗಿಸಿ ಇಡ್ತೇನೆ, ಮುಂದೆ ನಿನಗೆ ಪ್ರಾಯ ಆದಾಗ ಬೇಕಲ್ಲ ಕಾಫಿ ಕುಡಿಯಲು 'ಹೇಳಿದ *ಮಗನಮಾತು* ಅವನ ಕಣ್ಣು ತೆರೆಸಿತು. ತಕ್ಷಣ ಅಪ್ಪನನ್ನು ಮನೆಯೊಳಗೆ ಮಲಗಲು ವ್ಯವಸ್ಥೆ ಮಾಡಿ, ಪ್ರೀತಿ, ಗೌರವ, ಅಕ್ಕರೆಯಿಂದ ನೋಡಿಕೊಳ್ಳ ತೊಡಗಿದ. ವೃದ್ಧರಿಬ್ಬರಿಗೆ ಸಂತಸವಾಯಿತು. ಹಿರಿಯರೊಂದಿಗೆ ಕೂಡಿ ಬಾಳುವುದರಿಂದ *ಮನೆಯೇ ಸ್ವರ್ಗ*ದಂತಾಗಿದೆ ಅಂದುಕೊಂಡ ರಾಜು.

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ.