ನ್ಯಾನೋ ಕಥೆ - ಮುಕ್ತಿ
ರಾಣಿಯ ಮದುವೆಗೆ ಬಂದವರೆಲ್ಲ 'ರತಿ ಮನ್ಮಥರ'ಹಾಗಿದ್ದಾರೆ ಹೇಳುತ್ತಿದ್ದರು. ಈಗಂತೂ ಚೊಚ್ಚಲ ಬಸುರಿ ಬೇರೆ. ದಿನತುಂಬಿ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದಳು. ಒಂದು ದಿನ ಅಡುಗೆ ಮನೆಯಲ್ಲಿ ತಲೆಸುತ್ತು ಬಂದು ಬಿದ್ದ ರಾಣಿ ಮತ್ತೆ ಏಳಲೇ ಇಲ್ಲ. ಈ ಲೋಕದ ಪರಿವೇ ಇಲ್ಲದೆ , ಜೀವಂತ ಶವದಂತೆ ಮಲಗಿರುತ್ತಿದ್ದಳು. ರಾಣಿಯ ತಾಯಿ ಕಂಡ ಕಂಡ ದೇವರನ್ನು ನಿತ್ಯವೂ ಪ್ರಾರ್ಥನೆ ಮಾಡುತ್ತಿದ್ದರು. ಪುಟ್ಟ ಮಕ್ಕಳನ್ನು ನೋಡಿ ಕಣ್ಣೀರು ಸುರಿಸುತ್ತಿದ್ದರು. ವೈದ್ಯರಿಂದ ಸತ್ಯ ಗೊತ್ತಾದ ಪತಿ ಮೌನವಾಗಿಯೇ ದೇವರ ಮೊರೆ ಹೊಕ್ಕಿದ್ದ. ಉಸಿರು ನಿಲ್ಲಿಸಿದ ರಾಣಿ ಬಿಳಿ ಬಟ್ಟೆಯಡಿಯಲ್ಲಿ ನೋವಿಗೆ ಮುಕ್ತಿ ಹಾಡಿ ಮಲಗಿದ್ದಳು.
-ರತ್ನಾ ಕೆ.ಭಟ್, ತಲಂಜೇರಿ