ನ್ಯಾನೋ ಕಥೆ - ಶುದ್ಧ ಹಸ್ತ
ಎರಡು ಹಸುಗಳನ್ನು ಸಾಕುತ್ತಾ, ಹಾಲಿಗೆ ಸ್ವಲ್ಪ ಸಹ ನೀರು ಹಾಕದೆ, ಅತ್ಯಂತ ಶೃದ್ಧೆಯಿಂದ, ಪರಿಸರದ ಮನೆಗಳಿಗೆ ಹಾಲು ಕೊಟ್ಟು, ಜೀವನ ಮಾಡುತ್ತಿದ್ದಳು ರಾಜಮ್ಮ. ರಾತ್ರಿ ಬೀಸಿದ ಗಾಳಿಮಳೆಗೆ ದನದ ಹಟ್ಟಿ ಮುರಿದು ಬಿತ್ತು. ರಾಜಮ್ಮನ ಪ್ರಾಮಾಣಿಕತೆಯನ್ನು ಅರಿತಿದ್ದ ಸುತ್ತಮುತ್ತಲಿನವರು ಒಟ್ಟಾಗಿ, ಮುರಿದುಬಿದ್ದ ಹಟ್ಟಿಯನ್ನು ಹೊಸದಾಗಿ ಕಟ್ಟಿ ಕೊಟ್ಟು ಸಹಕರಿಸಿದರು. ವ್ಯಾಪಾರದಲ್ಲಿ ಶುದ್ಧಹಸ್ತವಿದ್ದಾಗ ಎಲ್ಲರ ಸಹಕಾರ ಇದ್ದೇ ಇರುತ್ತದೆ.
-ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ