ನ್ಯಾನೋ ಕಥೆ: ಸಂಯಮ

ನ್ಯಾನೋ ಕಥೆ: ಸಂಯಮ

ರೈತ ರಾಮಣ್ಣ ಸಾಲಮಾಡಿ ಎರಡು ಎಕರೆ ಗದ್ದೆಯಲ್ಲಿ ಬೇಸಾಯ ಮಾಡಿದ. ಬಿಸಿಲ ಝಳಕ್ಕೆ ಪೈರು ಒಣಗಿ, ಮಳೆಯಿಲ್ಲದೆ ನೀರಿಲ್ಲದೆ ನಾಶವಾಯಿತು.ರಾತ್ರಿ ಗದ್ದೆ ಬದಿಗೆ ಹೋದವ, ಇನ್ನು ಬದುಕಿ ಪ್ರಯೋಜನವಿಲ್ಲ, ಸಾಯುವುದೇ ಮೇಲೆಂದು ತೀರ್ಮಾನಿಸಿದ. ಒಮ್ಮೆ ಪತ್ನಿ ,ಮಕ್ಕಳು ಕಣ್ಣೆದುರು ಬಂದರು. ಆಗ ಒಳಮನಸ್ಸು *ಜೀವ ಕಳಕೊಂಡರೆ ನಾಲ್ಕು ದಿನ ಕಣ್ಣೀರು ಹಾಕಿ, ಮೊದಲಿನಂತೆ ಆದಾರು, ಆದರೆ ನಿನ್ನ ಜೀವ ಪುನಃ ಬಾರದು, ಸಂಯಮ ತಂದುಕೊ* ಎಂದು ಎಚ್ಚರಿಸಿತು. ಈ ವರ್ಷ ಅಲ್ಲದಿದ್ದರೆ ಮುಂದಿನ ವರ್ಷ ಎಂದು ಮನೆಗೆ ಬಂದು ಏನೂ ಆಗದವನಂತೆ ನಿದ್ದೆಗೆ ಜಾರಿದ.

-ರತ್ನಾ ಭಟ್ ತಲಂಜೇರಿ