ಪಂಗುಂ ಲಂಘಯತೇ ಗಿರಿಂ|

ಪಂಗುಂ ಲಂಘಯತೇ ಗಿರಿಂ|

ಬರಹ

ಇದು ಭಗವದ್ಗೀತೆಯಲ್ಲಿ ಬರುವ ಶ್ರೀ ಕೃಷ್ಣನಲ್ಲಿ ಅಡಗಿರುವ ಅಗಾಧ ಶಕ್ತಿಯನ್ನು ಸೂಚಿಸಿದರೆ, ಈ ಯುವತಿ ಇದನ್ನು ಸತ್ಯವನ್ನಾಗಿಸ ಹೊರಟ ದಿಟ್ಟೆ ಎನ್ನಿಸುತ್ತಿದೆ. ಪಕ್ಕದ ಚಿತ್ರದಲ್ಲಿರುವ ಶಾಂತ ಧಾರವಾಡದ ಸಮೀಪದವಳು. ಎರಡೂ ಕಾಲು ಇಲ್ಲದ ಅಂಗವಿಕಲೆ. ಈಕೆಗೆ ಇರುವ ಅಚಲ ಭಕ್ತಿ ಶ್ರದ್ಧೆಗಳಿಂದಾಗಿ ಇವಳನ್ನು ಈ ಅಸಾಮಾನ್ಯ ಗುರಿ ಸಾಧಿಸಿದಳು.
ಇದು ನಡೆದದ್ದು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಪುಣ್ಯ ಕ್ಷೇತ್ರ ಶ್ರೀ ಭಗವಾನ್ ಶ್ರೀಧರ ಸ್ವಾಮಿಜಿಯವರು ನೆಲೆಸಿದ ಶ್ರೀ ವರದಪುರ ಅಥವಾ ವರದಹಳ್ಳಿಯಲ್ಲಿ. ಈಕೆ ಹರಕೆ ಹೊತ್ತ ತನ್ನ ಅಕ್ಕ ಭಾವ, ಬಂಧು ಬಾಂಧವರೊಡನೆ ವರದ ಹಳ್ಳಿಗೆ ಬಂದು ಅಲ್ಲಿಯ ಗುಡ್ಡದ ಮೇಲಿರುವ ಶ್ರೀಗಳ ಸಮಾಧಿ ಸ್ಥಳಕ್ಕೆ ಸುಮಾರು 300ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಕ್ರಮಿಸಿ ತನ್ನ ವಿಜಯದ ನಗೆ ಬೀರಿ ದೇವರಲ್ಲಿ ತನ್ನ ಪ್ರಾರ್ಥನೆ ಸಲ್ಲಿಸಿ ಧನ್ಯತಾ ಭಾವದಿಂದ ಬೀಗುತ್ತಿದ್ದುದು ಅಚ್ಚರಿ ಮೂಡಿಸಿತು.
ಈಕೆ ತನಗೂ ಮೊದಲು ಹತ್ತಲು ಅಸಾಧ್ಯ ವೆನಿಸಿದ್ದರೂ, ಪ್ರಯತ್ನ ಮಾಡೋಣವೆಂದು ಪ್ರಾರಂಭಿಸಿದೆ, ದೇವರ ದಯೆಯಿಂದ ತುದಿಯನ್ನು ತಲುಪಿದೆ. ದೇವರ ದಯೆ ಇದ್ದಲ್ಲಿ ಏನನ್ನೂ ಸಾಧಿಸುವ ದೃಢತೆ ಮೂಡಿದೆ ಎನ್ನುತ್ತಾಳೆ.
ಇದೇ ಭಹುವಾಗಿ ಭಗವದ್ಗೀತೆಯ ಸಾಲೂ ಹೇಳುತ್ತಿರಬಹುದು. ಶ್ರದ್ಧೆ, ವಿಶ್ವಾಸ ಇದ್ದಲ್ಲಿ ಮೂಕಂ ಕರೋತಿ ವಾಚಾಲಂ, ಪಂಗುಂ ಲಂಘಯತೇ ಗಿರಿಂ, ಯತ್ಕೃಪಾ ತಮಹಮ್ ವಂದೇ, ಪರಮಾನಂದಮಾಧವಂ.
ನಾನು ಇತ್ತೀಚೆಗೆ ವರದಹಳ್ಳಿಗೆ ಹೋದಾಗ ಕಂಡ ಅಪರೂಪದ ದೃಶ್ಯ ಇದು.