ಪಂ(ಚ್)ಚ ಕಜ್ಜಾಯ
ಕವನ
ಅಲ್ಲಿ
ಹರಿವ
ಬೆವರಲ್ಲಿ
ಉಪ್ಪು,
ಇಲ್ಲಿನ
ರಕ್ತದಲಿ
ಸಿಹಿ
ಸಕ್ಕರೆ..........
+++++++++++++++
ನಿನ್ನ
ಮೈ
ಮುಟ್ಟಲು
ಮಾಡಿದ
ವಿಫಲ
ಪ್ರಯತ್ನಗಳು
ನನ್ನನು
ಹತಾಶೆಗೆ
ತಳ್ಳುವ
ಮೊದಲೇ
ನಿನ್ನ
ಚೆಲ್ಲಾಟಗಳು
ಮತ್ತೆ, ಮತ್ತೆ
ಅಣುಕಿಸುತ್ತವೆ..............
+++++++++++++++++
ಅವಳು
ಸುತ್ತಲಿನ
ಹಚ್ಚ ಹಸುರಿನಲಿ
ಮೈ
ಮರೆತಳು
ಅವನು
ಎಂದಿನಂತೆ
ಪತ್ರಹರಿತ್ತಿನ
ಕುರಿತು
ಲೆಕ್ಚರ್
ಶುರುಮಾಡಿದ...........
+++++++++++++++++
ಊರ
ಸಾಹುಕಾರರ
ಮನೆಗೆ
ಸೇರು
ತುಪ್ಪವ
ಮಾರಿದ
ಹೆಂಗಸು
ಮಾರಿಯಮ್ಮನ
ಮುಂದೆ
ಕುಣಿವ
ತನ್ನ
ಗಂಡನ
ಮೈಮೇಲೆದ್ದ
ಬಾಸುಂಡೆಗಳಿಗೆ
ಸವರಲು
ಎಣ್ಣೆಯನು
ಅವರಿಂದಲೇ
ಎರವಲು
ಪಡೆದಳು..............
(ಸ್ವಲ್ಪ ಸಾಲು ದೊಡ್ಡದಾಯ್ತೇನೊ)
+++++++++++++++++++++++++++
ನೀನು
ಮಹಾ
ಚಾಲಾಕಿ,
ಎಲ್ಲರೆದುರು
ಸಿಳ್ಳೆ ಹೊಡೆದು
ಕಣ್ ಕೂಡಿಸುವ
ಗಟ್ಟಿಗಿತ್ತಿ
ನಾನೋ
ಅರ್ಜುನ ಸನ್ಯಾಸಿ,
ಒಳಗಿನ
ಕಂಪನವ
ಸಹಿಸದೇ
ಬೆವರುತ್ತಿದ್ದೇನೆ................
Comments
ಉ: ಪಂ(ಚ್)ಚ ಕಜ್ಜಾಯ
In reply to ಉ: ಪಂ(ಚ್)ಚ ಕಜ್ಜಾಯ by prasadbshetty
ಉ: ಪಂ(ಚ್)ಚ ಕಜ್ಜಾಯ
ಉ: ಪಂ(ಚ್)ಚ ಕಜ್ಜಾಯ
In reply to ಉ: ಪಂ(ಚ್)ಚ ಕಜ್ಜಾಯ by inchara123
ಉ: ಪಂ(ಚ್)ಚ ಕಜ್ಜಾಯ
ಉ: ಪಂ(ಚ್)ಚ ಕಜ್ಜಾಯ
In reply to ಉ: ಪಂ(ಚ್)ಚ ಕಜ್ಜಾಯ by venkatb83
ಉ: ಪಂ(ಚ್)ಚ ಕಜ್ಜಾಯ