ಪಕ್ಷಿ ಹಬ್ಬ‌

ಪಕ್ಷಿ ಹಬ್ಬ‌

ಪಕ್ಷಿ ಹಬ್ಬ‌ 
 
ಕರ್ನಾಟಕದಲ್ಲಿರುವ ಒಟ್ಟು ಪಕ್ಷಿಿಗಳ ಸಂಖ್ಯೆೆ 537. ನಮ್ಮ ಬಗಲಲ್ಲಿರುವ ಪುಟ್ಟ ರಾಜ್ಯ ಗೋವಾದಲ್ಲಿ ಸುಮಾರು 440 ಪಕ್ಷಿಿಪ್ರಬೇಧಗಳಿವೆ ಎಂದು ಆ ರಾಜ್ಯದ ಪಕ್ಷಿಿಪ್ರೇಮಿಗಳ ಸಂಸ್ಥೆೆಗಳು ಮತ್ತು ಅಲ್ಲಿನ ಸರಕಾರ ಹೊಗಳಿಕೊಳ್ಳುತ್ತಿಿವೆ. ವಿಷಯ ಅದಲ್ಲ. ಇದೇ ಜನವರಿ 12ರಿಂದ 14ರ ತನಕ ಗೋವಾದಲ್ಲಿ ಎರಡನೆಯ ‘ಗೋವಾ ಪಕ್ಷಿಿ ಹಬ್ಬ’ವನ್ನು ಅವರು ನಡೆಸುತ್ತಿಿದ್ದಾಾರೆ! ನಮ್ಮ ರಾಜ್ಯಕ್ಕಿಿಂತ ಪುಟ್ಟದಾಗಿರುವ ಗೋವಾವು ಪಕ್ಷಿಿ ಹಬ್ಬವನ್ನು ಆಚರಿಸಿಕೊಳ್ಳುತ್ತಿಿದೆ ಎಂಬ ಕುರಿತು ಹೊಟ್ಟೆೆಕಿಚ್ಚು ಖಂಡಿತಾ ಇಲ್ಲ. ಆದರೆ, ಆ ರಾಜ್ಯಕ್ಕಿಿಂತ ಹೆಚ್ಚು ಪರಿಸರಿ ವೈವಿಧ್ಯವನ್ನು ಹೊಂದಿರುವ, ಹೆಚ್ಚು ಸಂಪನ್ಮೂಲವುಳ್ಳ, ಹೆಚ್ಚು ವಿಸ್ತಾಾರವಾದ ಜಲಸಂಪನ್ಮೂಲವಿರುವ, ಹೆಚ್ಚು ವಿಸ್ತೀರ್ಣದ ಪಶ್ಚಿಿಮ ಘಟ್ಟಗಳ ಕಾಡನ್ನು ಹೊಂದಿರುವ ಕರ್ನಾಟಕ ಈ ನಿಟ್ಟಿಿನಲ್ಲಿ ಯಾಕೆ ಹಿಂದೆ ಉಳಿದಿದೆ? ಇಂಥದೊಂದು ಪರಸರ ಪ್ರೇಮಿ ಮತ್ತು ಪ್ರವಾಸಿ ಸ್ನೇಹಿ ಚಟುವಟಿಕೆಯನ್ನು ನಮ್ಮ ರಾಜ್ಯದವರೂ ಹಮ್ಮಿಿಕೊಳ್ಳಬಹುದಿತ್ತಲ್ಲವೆ? ಪಕ್ಷಿಿ ವೀಕ್ಷಣೆಯಂತಹ ಪರಿಸರ ಪ್ರೇಮಿ ಚಟುವಟಿಕೆಗಳಿಂದ ಪ್ರವಾಸಿಗರಿಗೆ ಪೂರಕವಾದ ವಾತಾವರಣವನ್ನು ಇಲ್ಲಿಯೂ ನಿರ್ಮಿಸಲು ಅಸಾಧ್ಯವೆ? ಆ ಮೂಲಕ, ಇಲ್ಲಿನ ಹಳ್ಳಿಿ ಪಟ್ಟಣಗಳ ಆರ್ಥಿಕ ಚಟುವಟಿಕೆಗಳಿಗೆ, ಸಣ್ಣ ಉದ್ಯಮಗಳಿಗೆ ಬೆಂಬಲ ಒದಗಿಸಲು ನಮ್ಮಿಿಂದ ಅಸಾಧ್ಯವೆ?
ಗೋವಾ ದವರು ‘ಪಕ್ಷಿಿ ಹಬ್ಬ’ವನ್ನು ಹೇಗೆ ಆಚರಿಸುತ್ತಿಿ ನೋಡೋಣ. ಅವರು ರೂಪಿಸಿರುವ ಅಂಥದೊಂದು ಪರಿಕಲ್ಪನೆ ನಿಜಕ್ಕೂ ಆಕರ್ಷಕವಾಗಿದೆ. ಗೋವಾ ಸರಕಾರದ ಅರಣ್ಯ ಇಲಾಖೆಯು ಮುಂದೆ ನಿಂತು ‘ಗೋವಾ ಪಕ್ಷಿಿ ಹಬ್ಬ’ವನ್ನು ಆಚರಿಸುತ್ತಿಿದೆ. ಅಲ್ಲಿನ ಪ್ರವಾಸೋದ್ಯಮ ಇಲಾಖೆ, ಗೋವಾ ಪಕ್ಷಿಿ ರಕ್ಷಣಾ ಜಾಲ (ಜಿಬಿಸಿಎನ್) ಮತ್ತು ಬರ್ಡ್‌ಸ್‌‌ಪಿಕ್‌ಸ್‌.ಕಾಂ ಮತ್ತಿಿತರ ಸಂಸ್ಥೆೆಗಳು ಈ ಹಬ್ಬದ ಸಹಭಾಗಿಗಳು. ನಿತ್ಯಹರಿದ್ವರ್ಣ ಕಾಡು ಮತ್ತು ಸಮುದ್ರತೀರ ಎಂಬ ಎರಡು ವೈವಿಧ್ಯದ ಪರಿಸರ ಇರುವುದರಿಂದ, ತಮ್ಮ ರಾಜ್ಯದಲ್ಲಿ  ನಡೆಸುವ ಪಕ್ಷಿಿ ಹಬ್ಬ ಹೆಚ್ಚು ಅರ್ಥಪೂರ್ಣ ಎಂಬುದು ಅಲ್ಲಿನ ಮುಖ್ಯ ಅರಣ್ಯಾಾಧಿಕಾರಿಗಳ ಅಂಬೋಣ. ‘ಗೋವಾ ಪಕ್ಷಿಿ ಹಬ್ಬ’ಕ್ಕೆೆ ಸಂಪನ್ಮೂಲ ವ್ಯಕ್ತಿಿಗಳಾಗಿ, ಪಕ್ಷಿಿ ತಜ್ಞರು, ಪರಿಸರ ತಜ್ಞರು, ಛಾಯಾಚಿತ್ರಗ್ರಾಾಹಕರು ಭಾಗವಹಿಸಲಿದ್ದು, ಸಮುದ್ರದಲ್ಲಿ ಪಯಣಿಸಿ ಪಕ್ಷಿಿ ಗುರುತಿಸುವ ಚಟುವಟಿಕೆಯೂ ಈ ಹಬ್ಬದಲ್ಲಿ ಅಡಕಗೊಂಡಿದೆ. ಅಭಯಾರಣ್ಯದಲ್ಲಿ ನಡಿಗೆ, ಪಕ್ಷಿಿಗಳ ಚಿತ್ರ ಬಿಡಿಸುವಿಕೆಯ ಕುರಿತು ಕಮ್ಮಟ, ಇತರ ಭಾಷಣಗಳ ಜತೆ, ಕರ್ನಾಟಕದ ಜಂಗಲ್ ಲಾಡ್‌ಜ್ಸ್‌ ಮತ್ತು ರೆಸಾರ್ಟ್‌ನ ಕಾರ್ತಿಕೇಯನ್ ಎಂಬವರು ‘ಆರ್ಗನೈಸಿಂಗ್ ನೇಚರ್ ಕ್ಯಾಾಂಪ್‌ಸ್‌ - ಜೆಎಲ್‌ಆರ್ ಅನುಭವ’ ಕುರಿತು ಮಾತನಾಡಲಿದ್ದಾಾರಂತೆ. 
ಗೋವಾದವರ ಇಂತಹ ಪ್ರಯತ್ನ ಕಂಡು, ಮೊದಲಿಗೆ ಅನಿಸಿದ್ದು ಇದು ನಮ್ಮ ರಾಜ್ಯದಲ್ಲೂ ಯಾಕೆ ನಡೆಯಬಾರದು ಎಂದು! ಅದಕ್ಕೆೆ ಸಾಕಷ್ಟು ಕಾರಣಗಳಿವೆ. ಗೋವಾದವರು ಪರಿಸರದ ಕುರಿತು, ಪಕ್ಷಿಿಗಳ ಕುರಿತು ಮತ್ತು ಭೌಗೋಳಿಕ ವೈವಿಧ್ಯದ ಕುರಿತು ತಾವು ಏನೆಲ್ಲಾಾ ಹೊಗಳಿಕೊಳ್ಳುತ್ತಾಾರೋ, ಅದಕ್ಕಿಿಂತ ಹೆಚ್ಚಿಿನದು ನಮ್ಮ ರಾಜ್ಯದಲ್ಲಿ ಇದೆ ಎಂಬ ವಾಸ್ತವದಿಂದಾಗಿ, ಈ ರೀತಿಯ ಯೋಚನೆ ಹೊಳೆಯತ್ತಿಿದೆ.
ಪಕ್ಷಿಿ ಪ್ರಬೇಧದ ಲೆಕ್ಕ ಹಿಡಿದರೆ, ಗೋವಾಕ್ಕಿಿಂತ ಹೆಚ್ಚಿಿನ ಪ್ರಬೇಧಗಳ ಹಕ್ಕಿಿಗಳನ್ನು ಹೊಂದಿರುವ ರಾಜ್ಯ ಕರ್ನಾಟಕ. ಮತ್ತು ಈ ಹಕ್ಕಿಿಗಳು ವಾಸಿಸುತ್ತಿಿರುವ ತಾಣವು ಗೋವಾಕ್ಕಿಿಂತ ಹೆಚ್ಚಿಿನ ವೈವಿಧ್ಯತೆಯನ್ನು ಹೊಂದಿದೆ. ಪುಟ್ಟ ರಾಜ್ಯವಾದ ಗೋವಾದಲ್ಲಿ ಇರುವದಕ್ಕಿಿಂತ ವಿಶಾಲವಾದ ಕಾಡು ಪ್ರದೇಶ, ಬಯಲು ಪ್ರದೇಶ, ಕರಾವಳಿ ತೀರ, ಕುರುಚಲು ಕಾಡು ನಮ್ಮಲ್ಲಿದೆ. ಅದಕ್ಕಿಿಂತಲೂ ಮಿಗಿಲಾಗಿ, ಅಬೇಧ್ಯವೆನಿಸಿರುವ, ಬಹುಮಟ್ಟಿಿಗೆ ವರ್ಜಿನ್ ಕಾಡುಗಳು ಸಹಾ ಕರ್ನಾಟಕದಲ್ಲಿ ಅಲ್ಲಲ್ಲಿ ಉಳಿದುಕೊಂಡಿವೆ. ಪಕ್ಷಿಿಗಳು ಗೂಡು ಕಟ್ಟುವ, ಮರಿ ಮಾಡುವ ಮತ್ತು ಆಹಾರ ಹುಡುಕುವ ಸ್ಥಳಗಳನ್ನು ಗಣನೆಗೆ ತೆಗೆದುಕೊಂಡಾಗಲೂ, ಗೋವಾಕ್ಕಿಿಂತ ಮಿಗಿಲಾದ ವಿಶಿಷ್ಟ ತಾಣಗಳು ಇಲ್ಲಿವೆ. ಮನುಷ್ಯ ಮತ್ತು ಹಕ್ಕಿಿಗಳ ಸೌಹಾರ್ದಯುತ ಬಾಳ್ವೆೆಗೆ ಹೆಸರಾದ ಕೊಕ್ಕರೆ ಬೆಳ್ಳೂರಿನಂತಹ ಪಕ್ಷಿಿಧಾಮಗಳನ್ನು ಹೊಂದಿರುವ ರಾಜ್ಯ ಕರ್ನಾಟಕ. 
ಈ ಎಲ್ಲಾಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ, ‘ಪಕ್ಷಿಿ ಹಬ್ಬ’ ನಡೆಸಲು ಕರ್ನಾಟಕವು  ಪ್ರಶಸ್ತವಾದ ರಾಜ್ಯ ಎನ್ನಬಹುದು. ‘ಗೋವಾ ಪಕ್ಷಿಿ ಹಬ್ಬ’ ದಂತೆಯೇ ‘ಕರ್ನಾಟಕ ಪಕ್ಷಿಿ ಹಬ್ಬ’ ನಡೆಸಿದರೆ, ಅಲ್ಲಿಗಿಂತಲೂ ಹೆಚ್ಚು ಅರ್ಥಪೂರ್ಣ ಚಟುವಟಿಕೆಗಳನ್ನು ನಡೆಸುವ ಅವಕಾಶ ಇಲ್ಲಿದೆ. ನೀರು ಹಕ್ಕಿಿಗಳ ಅಧ್ಯಯನಕ್ಕೆೆ ರಂಗನತಿಟ್ಟು, ಕೊಕ್ಕರೆ ಬೆಳ್ಳೂರುಗಳಂತಹ ಸ್ಥಳಗಳು ಅತ್ಯಂತ ಸೂಕ್ತ. ರಂಗನತಿಟ್ಟು ಪಕ್ಷಿಿಧಾಮವನ್ನು ಈಗಾಗಲೇ ಸಾಕಷ್ಟು ಅಭಿವೃದ್ಧಿಿಪಡಿಸಲಾಗಿದ್ದು, ಬೋಟಿಂಗ್ ಮತ್ತು ಇತರ ಅನುಕೂಲತೆಗಳನ್ನು ಒದಗಿಸಿರುವುದರಿಂದಾಗಿ, ಅಲ್ಲಿ ಹಕ್ಕಿಿಗಳನ್ನು ನೋಡುವುದು ಒಂದು ಅಪೂರ್ವ ಅನುಭವವೇ ಆಗಿದೆ. ಕೊಕ್ಕರೆ ಬೆಳ್ಳೂರಿನ ರಾಶಿ ರಾಶಿ ಕೊಕ್ಕರೆಗಳು ಮತ್ತು  ಅವುಗಳನ್ನು ತಮ್ಮ ಸ್ನೇಹಿತರಂತೆ ನೋಡಿಕೊಳ್ಳುವ ಅಲ್ಲಿನ ಹಳ್ಳಿಿ ಜನರು ‘ಪಕ್ಷಿಿ ಹಬ್ಬ’ ಕ್ಕೆೆ ಒಳ್ಳೆೆಯ ವೇದಿಕೆಯನ್ನು ಒದಗಿಸಬಲ್ಲರು. 
ದಟ್ಟ ಕಾಡಿನ ಹಕ್ಕಿಿಗಳ ಅಧ್ಯಯನಕ್ಕೆೆ ಒತ್ತು ಕೊಡುವುದಾದರೆ, ಕುದುರೆಮುಖ, ಪುಷ್ಪಗಿರಿ, ಬಿಳಿಗಿರ ರಂಗನಬೆಟ್ಟ ಮೊದಲಾದ ಪ್ರದೇಶದ ಕಾಡು ಸೂಕ್ತವೆನಿಸಬಲ್ಲದು. ಪ್ಲಾಾಂಟೇಷನ್ ಪ್ರದೇಶ ಮತ್ತು ಮಧ್ಯಮ ದಟ್ಟಣೆಯ ಕಾಡಿನ ಹಕ್ಕಿಿಗಳ ಅಧ್ಯಯನಕ್ಕೆೆ ಮಡಿಕೇರಿ ಮತ್ತು ಚಿಕ್ಕಮಗಳೂರು ಹೇಳಿ ಮಾಡಿಸಿದ ತಾಣಗಳು. ಬಯಲು ಪ್ರದೇಶದ ಪಕ್ಷಿಿಗಳನ್ನು ನೋಡಬೇಕೆಂದರೆ ನಂದಿ ಬೆಟ್ಟದ ಸರಹದ್ದು, ದೇವರಾಯನದುರ್ಗ, ಹಾಸನ, ಬೇಲೂರು, ರಾಣೆಬೆನ್ನೂರು, ದರೋಜಿ ಮೊದಲಾದ ಹಲವು ಪ್ರದೇಶಗಳಿವೆ. ‘ಪಕ್ಷಿಿ ಹಬ್ಬ’ ದಲ್ಲಿ ಇವೆಲ್ಲಾಾ ಸ್ಥಳಗಳನ್ನು ಸೇರಿಸಿಕೊಂಡರೆ, ಆ ಮೂಲಕ ಈ ಒಂದು ವಿಶಿಷ್ಟ ಹಬ್ಬವನ್ನು  ಇಡೀ ಕರ್ನಾಟಕಕ್ಕೆೆ ವಿಸ್ತರಿಸುವ ಅವಕಾಶವೂ ಇದೆ. ಆಡಳಿತ ಅನುಕೂಲಕ್ಕಾಾಗಿ ಚಿಕ್ಕ ಪ್ರದೇಶವನ್ನೇ ಆಯ್ಕೆೆ ಮಾಡುವ ಅನಿವಾರ್ಯತೆ ಇದ್ದರೆ, ಅದಕ್ಕೂ ನಮ್ಮ ರಾಜ್ಯದಲ್ಲಿ ಹಲವು ಆಯ್ಕೆೆಗಳಿವೆ : ರಂಗನತಿಟ್ಟು, ಪಿಲಿಕುಳ ಸರಹದ್ದು, ಮಡಿಕೇರಿ, ಬೆಂಗಳೂರು, ಕಾರವಾರದಂತಹ ಸ್ಥಳಗಳನ್ನೇ ಕೇಂದ್ರವಾಗಿಟ್ಟುಕೊಂಡು ಇಂತಹ ಹಬ್ಬವನ್ನು ನಡೆಸಬಹುದು.
ಬೆಂಗಳೂರು ನಗರದಲ್ಲಿ ಇಂದು ಕಂಡುಬರುವ ಹಕ್ಕಿಿಗಳ ಸಂಖ್ಯೆೆ ಎಷ್ಟು ಗೊತ್ತೆೆ? 2015ರ ಫೆಬ್ರವರಿ ತಿಂಗಳ ಒಂದೇ ದಿನದಲ್ಲಿ ಬೆಂಗಳೂರು ನಗರದ ಸರಹದ್ದಿನಲ್ಲಿ ಸುಮಾರು 250 ಪಕ್ಷಿಿ ಪ್ರಬೇಧಗಳನ್ನು ಗುರುತಿಸಲಾಗಿತ್ತು. ಚಳಿಗಾಲದಲ್ಲಿ ಬೆಂಗಳೂರಿಗೆ ಬಂದು ಹೋಗುವ ಹಕ್ಕಿಿಗಳನ್ನು ಲೆಕ್ಕ ಹಾಕಿದರೆ, ಈ ನಗರವು 300ಕ್ಕಿಿಂತ ಹೆಚ್ಚು ಹಕ್ಕಿಿಗಳು ಕಂಡು ಬರುವ ಸ್ಥಳ! ಅದಕ್ಕೆೆಂದೇ, ಪಕ್ಷಿಿ ಹಬ್ಬವನ್ನು ನಗರ ಮಟ್ಟದಲ್ಲಿ ಆಚರಿಸುವುದಾದರೆ, ಬೆಂಗಳೂರು ಉತ್ತಮ ಆಯ್ಕೆೆ!
               
 ಪರಿಸರ ಸಂಬಂಧಿ ‘ಹಬ್ಬ’ಗಳನ್ನು ನಡೆಸುವಾಗ ಒಂದು ಅಂಶವಂತೂ ಸ್ಪಷ್ಟ. ಇಂತಹ ಚಟುವಟಿಕೆಗಳೆಲ್ಲವೂ ಪ್ರವಾಸೋದ್ಯಮಕ್ಕೆೆ ಪೂರಕವಾಗಿರುವಂತಹದ್ದು. ಪ್ರವಾಸಿ ಸ್ನೇಹಿ ವಾತಾವರಣವಿರುವ ರಾಜ್ಯದಲ್ಲಿ ‘ಪಕ್ಷಿಿ ಹಬ್ಬ’ ನಡೆಸುವುದು ಸುಗಮ ಎನ್ನಬಹುದು. ಇದನ್ನೇ ಇನ್ನೊೊಂದು ರೀತಿಯಲ್ಲಿ ಹೇಳುವುದಾದರೆ, ಇಂತಹ ಹಬ್ಬಗಳನ್ನು ಹೆಚ್ಚು ಹೆಚ್ಚು ನಡೆಸಿದರೆ, ಅವು ನಡೆಯುವ ಸ್ಥಳಗಳ ಪ್ರವಾಸೋದ್ಯಮಕ್ಕೆೆ  ಇಂಬು ಕೊಟ್ಟಂತಾಗುತ್ತದೆ. ಸುತ್ತಲಿನ ಪರಿಸರ ಮತ್ತು ವಾತಾವರಣವನ್ನು ಕಲುಷಿತಗೊಳಿಸದೇ ನಡೆಸುವ ಇಂತಹ ಚಟುವಟಿಕೆಗಳಿಂದಾಗಿ, ಭಾಗವಹಿಸುವವರಿಗೆ ಮನೋಲ್ಲಾಾಸ ದೊರೆತು, ಜ್ಞಾಾನಾರ್ಜನೆಗೆ ಅವಕಾಶ ದೊರೆಯುವುದು ಒಂದೆಡೆ. ಇನ್ನೊೊಂದೆಡೆ, ಇಂತಹ ಚಟುವಟಿಕೆಗಳು ನಡೆಯುವ ಹೊತ್ತಿಿನಲ್ಲೇ, ಆ ಸ್ಥಳದ ಜನರ ವಾಣಿಜ್ಯ ಚಟುವಟಿಕೆಗಳಿಗೆ (ಹೋಟೆಲ್, ಪ್ರವಾಸಿ ವಾಹನ ಬಾಡಿಗೆ, ಗೈಡ್ ಇ.) ಪೂರಕವಾಗುತ್ತದೆ ಇಂತಹ ‘ಪಕ್ಷಿಿ ಹಬ್ಬ’. ಇದೇ ಸಮಯದಲ್ಲೇ, ಅಪಾಯದಂಚಿನಲ್ಲಿರುವ ಹಕ್ಕಿಿಗಳನ್ನು ಗುರುತಿಸಿ, ಅವುಗಳ ವಾಸ ಸ್ಥಳವನ್ನು ಸಂರಕ್ಷಿಿಸುವ ಪ್ರಯತ್ನಕ್ಕೂ, ಜನರಲ್ಲಿ ಪರಿಸರದ ಕುರಿತು ಇನ್ನಷ್ಟು ಕಾಳಜಿಯನ್ನು ಬೆಳೆಸುವುದಕ್ಕೂ  ಇದರಿಂದ ಅವಕಾಶ ಇದೆ. 
ಜನವರಿ 12 ರಿಂದ 14 ರ ತನಕ ನಡೆಯುವ ‘ಗೋವಾ ಪಕ್ಷಿಿ ಹಬ್ಬ’ ಒಂದು ಒಳ್ಳೆೆಯ ಚಟುವಟಿಕೆ. ಅಂತಹ ‘ಹಬ್ಬ’ವನ್ನು ನಡೆಸಲು ಪ್ರಶಸ್ತ ರಾಜ್ಯವಾಗಿರುವ ಕರ್ನಾಟಕದಲ್ಲೂ ಇಂತಹದೇ ‘ಹಬ್ಬ’ ನಡೆಸಿ, ಪರಿಸರ ಪ್ರೇಮ ಮತ್ತು ರಕ್ಷಣೆಯಲ್ಲೂ  ನಾವು ಹಿಂದೆ ಬಿದ್ದಿಲ್ಲ ಎಂದು ಋಜುವಾತು ಪಡಿಸಲಾಗದೆ? ಕರ್ನಾಟಕ ಅರಣ್ಯ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಮತ್ತು ಇತರ ಸಮಾನಾಸಕ್ತ ಸಂಸ್ಥೆೆಗಳು ಈ ನಿಟ್ಟಿಿನಲ್ಲಿ ಕಾರ್ಯಪ್ರವತ್ತರಾದರೆ, ಇದು ಅಸಾಧ್ಯವೇನಲ್ಲ!
                                                                                                                                                     - ಶಶಿಧರ ಹಾಲಾಡಿ .
( ಚಿತ್ರ‌ : ವಿಕಿಪೀವಿಯಾ ಕಾಮನ್ಸ್)