ಪಡು

ಪಡು

Comments

ಬರಹ

ಪಡು ಇದಕ್ಕೆ ಸಾಕಷ್ಟು ಅರ್ಥಗಳಿವೆ.
೧) ಪಡು=ಮಲಗು, ಸೂರ್ಯ ಪಡುವ ದಿಕ್ಕು ಪಡುವಲು
ಪಡಸಾಲೆ, ಪಡುಕೋಣೆ=ಮಲಗುವ ಕೊಠಡಿ
ಪೞ್ಕೆ=ಪಕ್ಕೆ= ಮಲಗುವ ಮಗ್ಗುಲು ಮನುಷ್ಯ ಎಡ ಅಥವಾ ಬಲಮಗ್ಗುಲಲ್ಲೆ ಮಲಗುವುದಱಿಂದ ಪೞ್ಕೆ(ಪಕ್ಕೆ)
ಹಾಗೆಯೇ ಪೞ್ಕೆಲುಬು=ಪಕ್ಕೆಲುಬು
೨) ಪಡು=ಅನುಭವಿಸು, ಹೊಂದು
ಉದಾ:- ಅವನು ಸಂತೋಷ ಪಟ್ಟನು. ಅವನು ದುಃಖ ಪಟ್ಟನು
ಭಾವನಾಮ ಪಾಡು=ಅನುಭವ

೩) ಪಡು=ಸಂಭೋಗಿಸು (ಹೊಸಗನ್ನಡದಲ್ಲಿ ಹಡು)

ಎಲ್ಲವುದಱಗಳ ಭೂತಕೃದ್ವಾಚಿ ಪಟ್ಟು (ಹೊಸಗನ್ನಡದಲ್ಲಿ ಹಡುವಿಗೆ ರೂಪ ಹಟ್ಟು)
ವರ್ತಮಾನಕೃದ್ವಾಚಿ ಪಡುವ( ’ಹಡು’ಗೆ ಹಡುವ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet