ಪತಿಯ ಆಯಸ್ಸು ಹೆಚ್ಚಾಗಲು...
ಪತಿಯ ಆಯಸ್ಸು ಹೆಚ್ಚಾಗಿ ಅವರು ಜೀವನದಲ್ಲಿ ಯಶಸ್ಸನ್ನು ಹೊಂದಬೇಕೆಂದರೆ ಹೆಣ್ಣುಮಕ್ಕಳು ಮಂಗಳ ಸೂತ್ರದಲ್ಲಿ ಯಾವಾಗಲೂ ಇದನ್ನು ಇಟ್ಟುಕೊಳ್ಳಲೇ ಬೇಕು. ಮಂಗಳ ಸೂತ್ರಕ್ಕೆ ನಮ್ಮ ಸಂಪ್ರದಾಯದಲ್ಲಿ ಒಂದು ಗೌರವವಿದೆ ಅಗಾಧವಾದ ಸ್ಥಾನಮಾನ ಗೌರವವನ್ನು ಕೊಟ್ಟು ಈ ಮಂಗಳ ಸೂತ್ರಕ್ಕೆ ಇಂದಿಗೂ ಕೂಡ ಒಂದು ಎತ್ತರದ ಸ್ಥಾನದಲ್ಲಿ ಇಟ್ಟು ಇದನ್ನು ಪೂಜಿಸಲಾಗುತ್ತದೆ ಮತ್ತು ಮದುವೆಯಲ್ಲಿ ಈ ಮಂಗಳ ಸೂತ್ರವನ್ನು ನೀಲ ಲೋಹಿತ ಗೌರಿಯ ಬಳಿ ಇಟ್ಟು ಈ ಮಂಗಳ ಸೂತ್ರವನ್ನು ಪೂಜಿಸಲಾಗುತ್ತದೆ. ಅಷ್ಟೇ ಅಲ್ಲ ನಮ್ಮ ಸಂಪ್ರದಾಯದಲ್ಲಿ ಮಂಗಳ ಸೂತ್ರಕ್ಕೆ ನೀಡುವಷ್ಟು ಪ್ರಾಮುಖ್ಯತೆಯನ್ನು ಗೌರವವನ್ನು ಈ ಸಮಾಜದಲ್ಲಿ ನಮ್ಮ ಹಿರಿಯರು ಸುಮಂಗಲಿಯರಿಗೆ ಕೂಡ ನೀಡಲಾಗುತ್ತದೆ.
ಆಕೆಯು ಸುಮಂಗಲಿಯರಿಗೆ ಗೌರವವನ್ನು ನೀಡುವುದು ಕೂಡ ನಮ್ಮ ಸಂಪ್ರದಾಯದ ಒಂದು ಪದ್ಧತಿ ಆಗಿದೆ. ಈ ದಿನದ ಮಾಹಿತಿಯಲ್ಲಿ ನಾನು ನಿಮಗೆ ತಿಳಿಸಲು ಹೊರಟಿರುವ ಅಂತಹ ವಿಚಾರವೇನು ಅಂದರೆ ಸುಮಂಗಲಿ ಹೆಣ್ಣುಮಕ್ಕಳು ಯಾವುದೇ ಕಾರಣಕ್ಕೂ ಹಣೆಗೆ ಕಪ್ಪು ಬೊಟ್ಟನ್ನು ಇಡಬಾರದು ಕಪ್ಪು ಬಟ್ಟೆ ಮಾತ್ರ ಅಲ್ಲ ಕಪ್ಪು ಬಣ್ಣದ ಸ್ಟಿಕ್ಕರ್ ಗಳನ್ನು ಕೂಡಾ ಹಣೆಗೆ ಇಡಬಾರದು ಅಂತ ಹೇಳ್ತಾರೆ ಯಾಕೆ ಮತ್ತು ಅದಕ್ಕೆ ಕಾರಣವೇನು ಅನ್ನುವುದನ್ನು ಕೆಳಗಿನ ಮಾಹಿತಿಯಲ್ಲಿ ತಿಳಿಸುತ್ತೇವೆ.
ಹೌದು, ಸಾಮಾನ್ಯವಾಗಿ ಹೆಣ್ಣುಮಕ್ಕಳು ಹಣೆಗೆ ತಿಲಕವನ್ನು ಇಡಬೇಕು. ಇದು ನಮ್ಮ ಸಂಪ್ರದಾಯದ ಪದ್ಧತಿಯಾಗಿದೆ. ಹಾಗೆ ಅಂದವಾಗಿ ಕಾಣಲು ಈ ತಿಲಕ ಹಣೆಗೆ ಅವಶ್ಯವಾದದ್ದು. ಇತ್ತೀಚಿನ ದಿನಗಳಲ್ಲಿ ಅಂತೂ ಹಣೆಗೆ ಇಡುವುದಕ್ಕಾಗಿ ಸಿಂಧೂರವನ್ನಾಗಿ ಹಲವಾರು ಡಿಸೈನ್ ಸ್ಟಿಕರ್ ಗಳು ಲಗ್ಗೆ ಇಟ್ಟಿದೆ. ಇದಕ್ಕೆ ಹೆಣ್ಣುಮಕ್ಕಳು ಮಾರು ಹೋಗಿ ತಮ್ಮ ಸಂಪ್ರದಾಯವನ್ನು ಮರೆಯುತ್ತಿದ್ದಾರೆ. ಕೆಲವರು ಈ ರೀತಿ ಪ್ರಶ್ನೆಯನ್ನು ಹಾಕ್ತಾರೆ, ಹಣೆಗೆ ಕಪ್ಪು ಬಣ್ಣದ ಬೊಟ್ಟನ್ನು ಇಡಬಾರದು, ಅಂದರೆ ಕತ್ತಿಗೆ ಹಾಕಿರುವ ಕರಿಮಣಿ ಕಪ್ಪು ಬಣ್ಣದ್ದು ಅಂತ ಆದರೆ ಈ ಕಪ್ಪು ಬಣ್ಣದ ಮಂಗಳ ಸೂತ್ರಕ್ಕೆ ಮಾಂಗಲ್ಯಕ್ಕೆ ನಮ್ಮಲ್ಲಿ ವಿಶೇಷವಾದ ಸ್ಥಾನಮಾನವಿದೆ. ಈ ಕರಿಮಣಿಯಲ್ಲಿ ಹೆಣ್ಣಿನ ಆರೋಗ್ಯವನ್ನು ಕಾಪಾಡುವ ಶಕ್ತಿ ಇದೆ, ಇದನ್ನು ವೈಜ್ಞಾನಿಕವಾಗಿಯೂ ಮತ್ತು ಆಧ್ಯಾತ್ಮಿಕವಾಗಿ ಕೂಡ ನಿರೂಪಿಸಲಾಗಿದೆ.
ಈ ಮೊದಲೇ ಹೇಳಿದ ಹಾಗೆ ಮದುವೆಯ ಸಮಯದಲ್ಲಿ ಮಂಗಳಸೂತ್ರವನ್ನು ನೀಲಲೋಹಿತ ಗೌರಿಯ ಬಳಿ ಈ ಮಂಗಳ ಸೂತ್ರವನ್ನು ಪೂಜೆ ಮಾಡುತ್ತಾರೆ ಮತ್ತು ಮದುವೆಯಲ್ಲಿ ಹೆಣ್ಣು ಮತ್ತು ಗಂಡನ ಸುಂದರವಾಗಿ ತಯಾರಿ ಮಾಡುತ್ತಾರೆ ಬಂದ ಜನರ ದೃಷ್ಟಿ ತಾಗಬಾರದು ಎಂದು ದೃಷ್ಟಿಯನ್ನು ಕೂಡ ಇಡ್ತಾರೆ ಈ ಕಪ್ಪು ಬಣ್ಣದ ಒಂದು ಬೊಟ್ಟು ದೃಷ್ಟಿಯನ್ನು ಕೂಡ ನಿವಾರಣೆ ಮಾಡುತ್ತದೆ, ಇದರ ಜೊತೆಗೆ ಈ ಕಪ್ಪು ಬಣ್ಣ ಶನಿಯ ಪ್ರತೀಕ ಅಂತ ಕೂಡ ಹೇಳ್ತಾರೆ.ಆದ ಕಾರಣ ಹೆಣ್ಣು ಮಕ್ಕಳು ಅಂದರೆ ಸುಮಂಗಲಿಯರು ಮದುವೆಯ ನಂತರದ ದಿವಸಗಳಲ್ಲಿ ಈ ಕಪ್ಪು ಬಣ್ಣವನ್ನು ಅಂದರೆ ಕಪ್ಪು ಬಣ್ಣದ ಬೊಟ್ಟನ್ನು ಹಣೆಗೆ ಇಡುವುದು ಶ್ರೇಯಸ್ಸಲ್ಲ ಇದು ಗಂಡನಿಗೂ ಕೂಡಾ ಒಳಿತಲ್ಲ ಎಂದು ಹೇಳಲಾಗಿದೆ.
ಸುಮಂಗಲೆಯರಿಗೆ ತಿಲಕವಾಗಿ ಕುಂಕುಮ ಶ್ರೇಷ್ಠ ಈ ಕುಂಕುಮ ಸುಮಂಗಲೆಯರಿಗೆ ಮಾತ್ರ ಅಲ್ಲ ಹೆಣ್ಣುಮಕ್ಕಳು ಹಣೆಯಲ್ಲಿ ಇರಿಸಿದಾಗ, ಅವರ ಅಂದ ಹೆಚ್ಚುತ್ತದೆ, ಅಷ್ಟು ಮಾತ್ರ ಅಲ್ಲ ಈ ಕೆಂಪು ಬಣ್ಣದ ತಿಲಕವನ್ನು ಇರಿಸುವುದರಿಂದ ಆರೋಗ್ಯವೂ ವೃದ್ಧಿಯಾಗುತ್ತದೆ ಮತ್ತು ಯಾವುದೇ ದೃಷ್ಟಿಯೂ ಕೂಡ ನಮಗೆ ತಗುಲುವುದಿಲ್ಲ
(ಆಧಾರ)-ಸತೀಶ್ ಶೆಟ್ಟಿ, ಚೇರ್ಕಾಡಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ