ಪದ್ಮ ಅವರ ಹನಿಗವನಗಳು
ಕವನ
* ಒಳ್ಳೆತನ*
ಕಬ್ಬಿನ ಗಿಡದ ಸುತ್ತ
ಅದೆಷ್ಟು ಬಾರಿ
ಸುಳಿದಾಡಿತ್ತೋ
ಜೇನ್ನೊಣ!
ಕಡಿದು ಜಜ್ಜಿದ
ಕೂಡಲೇ ಹುಟ್ಟಿಕೊಂಡಿತು
ಗೆಳತನ!
*ಸೋಲು*
ಹಿತ್ತಿಲ ಬೇಲಿಯ
ಹಿಂದೆ
ಮನುಷ್ಯ ಮನಸಿನ
ಹಗೆ!
ಒಂದೊಮ್ಮೆ
ಎಲ್ಲವನ್ನೂ ಸೋಲಿಸಿ
ಬಿಡುವುದು
ಚಿತೆಯ ಬೆಂಕಿಯ ಹೊಗೆ!
*ವಿರಹ*
ಪ್ರಿಯಾ. ..
ನೀನಿಲ್ಲದೆ ಶೂನ್ಯವಲ್ಲದಿದ್ದರೂ
.. ಈ ಲೋಕ!
ನನ್ನ ಪ್ರತಿ ಉಸಿರಿಗೂ
ಈಗ ಭೂಮಿ ತೂಕ!
*ಧ್ಯಾನ*
ಧನಿಕರ ಮದುವೆಯ
ಮಿಕ್ಕುಳಿದ ಅನ್ನವ
ಹೂಳುತ್ತಿದ್ದ ಬಡವ
ನುಂಗುತ್ತಿದ್ದ ಉಗುಳು!
ಅವನದೇ ಧ್ಯಾನದಲ್ಲಿರುವಂತಿತ್ತು
ಅನ್ನದ ಒಂದೊಂದು ಅಗುಳು!
*ಅವಳು ಮತ್ತು ಬಡತನ*
ಬಡಿಸಿದಳು. .
ನಾಲ್ಕಾರು ಬಟ್ಟಲ ತುಂಬಾ!
ಮೇಲೆ ಹರಿದ ಛಾವಣಿ....
ಅವಳ ಬಟ್ಟಲ ತುಂಬಾ
ಚಂದ್ರ ಬಿಂಬ!
*ಗುಟುಕು*
ಮರ ಯಾರದ್ದೋ
ಹಣ್ಣು ಯಾರದ್ದೋ
ಚಿಂತಿಲ್ಲ
ಗುಟುಕು ನೀಡೋ ಹಕ್ಕಿಗೆ!
ದನಿವರಿಯದ ಹೋರಾಟ
ಬದುಕಿ ಉಳಿಯುವ
ಹಕ್ಕಿಗೆ!
-*ಪದ್ಮಾ*
ಚಿತ್ರ್