ಪನೀರ್ ಪಾಯಸ

ಪನೀರ್ ಪಾಯಸ

ಬೇಕಿರುವ ಸಾಮಗ್ರಿ

ತುರಿದ ಪನ್ನೀರ್ ಅರ್ಧ ಕಪ್, ಕಂಡೆನ್ಸಡ್ ಮಿಲ್ಕ್ ಮುಕ್ಕಾಲು ಕಪ್, ಹಾಲು ಅರ್ಧ ಲೀಟರ್, ಒಣ ದ್ರಾಕ್ಷೆ ಮತ್ತು ಗೋಡಂಬಿ ಬೇಕಾದಷ್ಟು, ಬಾದಾಮಿ ಚೂರು ೧ ಚಮಚ, ಏಲಕ್ಕಿ ಹುಡಿ ೧ ಚಮಚ

ತಯಾರಿಸುವ ವಿಧಾನ

ಒಂದು ಪಾತ್ರೆಯಲ್ಲಿ ತುರಿದುಕೊಂಡ ಪನ್ನೀರ್ ಹಾಕಿ ಬಿಸಿ ಮಾಡಿ ಅದಕ್ಕೆ ಹಾಲು ಹಾಕಿ ಗಂಟಾಗದಂತೆ ೫-೬ ನಿಮಿಷಗಳ ಕಾಲ ನಿರಂತರವಾಗಿ ಕೈಯಾಡಿಸಿ. ನಂತರ ಅದಕ್ಕೆ ಕಂಡೆನ್ಸಡ್ ಮಿಲ್ಕ್ ಸೇರಿಸಿ, ೩-೪ ನಿಮಿಷಗಳ ಕಾಲ ನಿರಂತರವಾಗಿ ಕೈಯಾಡಿಸುತ್ತಿರಿ.

ಇದಕ್ಕೆ ಏಲಕ್ಕಿ ಹುಡಿ, ಸ್ವಲ್ಪ ಒಣ ದ್ರಾಕ್ಷಿ, ಗೋಡಂಬಿ, ಬಾದಾಮಿ ಚೂರುಗಳನ್ನು ಸೇರಿಸಿ ಮಿಶ್ರ ಮಾಡಿ. ಬೌಲಿಗೆ ಹಾಕಿದ ಮೇಲೆಯೂ ಒಣದ್ರಾಕ್ಷಿ, ಗೋಡಂಬಿ ಮತ್ತು ಬಾದಾಮಿ ಚೂರುಗಳಿಂದ ಅಲಂಕರಿಸಿ. ಇದನ್ನು ಫ್ರಿಡ್ಜ್ ನಲ್ಲಿಟ್ಟು ತಂಪಾಗಿಸಿ ನಂತರ ಸವಿಯಿರಿ. ಸಿಹಿ ಬೇಕಿದ್ದವರು ಸ್ವಲ್ಪ ಸಕ್ಕರೆಯನ್ನು ಮೊದಲು ಹಾಲಿನ ಜೊತೆ ಸೇರಿಸಿಕೊಳ್ಳಬಹುದು.