ಪಯಣ ಮತ್ತು ಕೆಲವು ಹನಿಗಳು

ಪಯಣ ಮತ್ತು ಕೆಲವು ಹನಿಗಳು

ಕವನ

ಕಡಲಿನ ಸದ್ದಿಗೆ

ಪರಿಸರ ಬೆಚ್ಚಿದೆ

ಜಲದಲಿ ಉಬ್ಬರವೊ

ತೆರೆತೆರೆ ಚಿಮ್ಮುತ

ತೀರಕೆ ಹೊಡೆದಿದೆ

ನೀರಿಗೆ ಖುಷಿಯದುವೊ

 

ದೋಣಿಲಿಯಂಬಿಗ

ಹುಟ್ಟನು ಹಾಕುತ

ಮುಂದಕೆ ಸಾಗಿಹನು

ಸುಂದರ ಹಾಡನು

ಬಾಯೊಳು ಗುಣುಗುತ

ಮೀನನು ಹಿಡಿದಿಹನು

 

ಬಾನಲಿ ಸೂರ್ಯನು

ಮುಳುಗುತ ಕೆಂಪಗೆ

ಜಲಕದು ಹೊಸತನವು

ಬಿಂಬದ ರೂಪವ

ಕಾಣುತ ಸಡಗರ

ಜನಕದು ಸಂತಸವು

 

ಚಿಣ್ಣರು ತೀರದಿ

ಕುಣಿ ಕುಣಿದಾಡುತ

ಆಟವನಾಡಿದರು

ದೊಡ್ಡವರೆಲ್ಲರು

ಸೇರುತವೊಂದೆಡೆ

ಲೋಕವ ಮರೆತಿಹರು

***

ಹನಿಗಳು

ಪ್ರಜಾಪ್ರಭುತ್ವದ

ನೆಲದಲ್ಲಿ

ಜನ

ಸಾಮನ್ಯ

ನೇ

ನಾಯಕ !

 

ಪ್ರಜಾಪ್ರಭುತ್ವದ

ನೆಲದಲ್ಲಿ

ನನ್ನ

ಎತ್ತಿಗೆ

ಮೂರೇ

ಕಾಲು

ಎನ್ನುವವರೇ 

ಜಾಸ್ತಿ !

***

ಬದುಕು

ಬರದಿರುವ ಋತುಗಳಲಿ ತಡವರಿಸಿ ಸಾಗುತಿಹೆ

ತರದಿರುವ ಪುಣ್ಯಗಳ ದೂರದೊಳು ತಳ್ಳುತಿಹೆ

ಮುದವಿರದ ಲೋಕದೊಳು ಪಯಣಿಸುತ ಹಾಡುತಲಿ

ಮದವಿರದ ಪ್ರೀತಿಯೊಳು ಪ್ರೇಮವನು ಹುಡುಕುತಲಿ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್